ವೀರಪ್ಪನ್
From Wikipedia
ಕೂಸೆ ಮುನಿಸ್ವಾಮಿ ವೀರಪ್ಪನ್ (ಜನವರಿ ೧೮, ೧೯೫೨ - ಅಕ್ಟೋಬರ್ ೧೮, ೨೦೦೪) - ಭಾರತದ ಕುಖ್ಯಾತ ದಂತಚೋರ, ನರಹಂತಕ. ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ಇರುವ ಸುಮಾರು ೬,೦೦೦ ಚದುರ ಕಿ.ಮೀ. ಕಾಡಿನಲ್ಲಿ ಜೀವನಪರ್ಯಂತ ವಾಸಿಸಿದ ಇವನು, ಅಲ್ಲಿಯೇ ತನ್ನ ಕಾರುಬಾರು ನೆಡೆಸುತ್ತಿದ್ದ. ಸುಮಾರು ೧೨೦ಕ್ಕೂ ಹೆಚ್ಚು ಜನರ ಕೊಲೆಗೆ ಕಾರಣವಾಗಿದ್ದ ಇವನು ಪೋಲಿಸರ ಕಣ್ಣಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಕಾಡಿನಲ್ಲಿದ್ದ ಆನೆಗಳ ಹತ್ಯೆ ಮಾಡುತ್ತಾ, ದಂತವನ್ನು, ಹಾಗೂ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದನು. ಇವನ ತಲೆಯ ಮೇಲೆ ಸುಮಾರು ೫ ಕೋಟಿ ಬಹುಮಾನವಿದ್ದರೂ ೨೦ ವರ್ಷಗಳವರೆಗೂ ಪೋಲೀಸರ ಕೈಗೆ ಸಿಕ್ಕದೆ ಹೋದನು. ಕೊನೆಗೆ ಅಕ್ಟೋಬರ್ ೧೮, ೨೦೦೪ ರಂದು ಪೋಲೀಸರ ಗುಂಡಿಗೆ ಬಲಿಯಾದನು.
[ಬದಲಾಯಿಸಿ] ಜೀವನ
ಕರ್ನಾಟಕದ ಗೋಪಿನಾಥಮ್ ಹಳ್ಳಿಯಲ್ಲಿ ಜನಿಸಿದ ವೀರಪ್ಪನ್, ಗೊಲ್ಲರ ಮನೆತನದಲ್ಲಿ ಹುಟ್ಟಿದವನು. ೧೮ನೇ ವಯಸ್ಸಿಗೇ ಅಕ್ರಮ ಶಿಕಾರಿಗೆ, ಪ್ರಾಣಿ ಹತ್ಯೆಗೆ ತೊಡಗಿದನು. ತನ್ನ ವಿರೋಧಿ ಪಂಗಡಗಳನ್ನು ನಾಶ ಮಾಡಿದ ಇವನು ವರ್ಷಗಳು ಉರುಳಿದಂತೆ ಇಡಿಯ ಕಾಡಿನ ನಿಯಂತ್ರಣವನ್ನು ಕೈಗೆ ತೆಗೆದುಕೊಂಡನು. ದಂತ ಹಾಗೂ ಶ್ರೀಗಂಧದ ಕಳ್ಲಸಾಗಾಣಿಕೆಯಿಂದ ದುಡ್ಡು ಮಾಡಿದನು. ೨,೦೦೦ಕ್ಕೂ ಹೆಚ್ಚು ಆನೆಗಳನ್ನು ಕೊಂದನೆಂದು ಹೇಳಲಾಗುತ್ತದೆಯಾದರೂ, ವೀರಪ್ಪನ್ ಬಗ್ಗೆ ಜೀವನ ಚರಿತ್ರೆಯನ್ನು ಬರೆದ ಸುನಾದ ರಘುರಾಮ್‌ರವರ ಪ್ರಕಾರ ೨೦೦ಕ್ಕೂ ಹೆಚ್ಚು ಆನೆಗಳನ್ನು ಕೊಂದಿರಲಾರ.
[ಬದಲಾಯಿಸಿ] ಕ್ರೂರಿಯ ಕಾಲಚಕ್ರ
- ೧೯೭೦ - ಕಳ್ಳಸಾಗಾಣಿಕೆದಾರರ ಗುಂಪೊಂದನ್ನು ಸೇರಿದನು.
- ೧೯೮೬ - ಬಂಧಿಸಿ ಬೂದಿಪಾಡ ಕಾಡಿನ ಗ್ಯೆಸ್ಟ್ ಹೌಸ್‌ನಲ್ಲಿ ಕೂಡಿಹಾಕಲಾಯಿತು. ಆದರೆ ನಿಗೂಡವಾಗಿ ಪರಾರಿಯಾದ. (ಲಂಚ ಕೊಟ್ಟು ಪರಾರಿಯಾದ ಎಂದು ಹೇಳಲಾಗುತ್ತದೆ)
- ೧೯೮೭ - ಫಾರೆಸ್ಟ್ ಆಫಿಸರ್ ಚಿದಂಬರಮ್ ಅವರನ್ನು ಅಪಹರಿಸಿ ಕೊಲೆಗೈದ. ತನ್ನ ವಿರೋಧಿ ಗುಂಪಿನ ೫ ಜನರನ್ನು ಕೊಲಗೈದ.
- ೧೯೮೯ - ಬೇಗೂರು ಅರಣ್ಯ ಪ್ರದೇಶದಲ್ಲಿ ೩ ಜನ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕೊಲೆಗೈದ.
- ೧೯೯೦ - ತನ್ನ ತಂಡದ ಇಬ್ಬರನ್ನು ಕೊಂದದ್ದಕ್ಕಾಗಿ ಸೇಡಿನಂತೆ ಇಬ್ಬರು ಪೋಲಿಸ್ ಸಿಬ್ಬಂದಿಯನ್ನು ಕೊಲೆಗೈದ.
- ಇನ್ನೂ ೪ ಕರ್ನಾಟಕದ ಪೋಲಿಸ್ ಅಧಿಕಾರಿಗಳನ್ನು ಕೊಲೆಗೈದ. ಕರ್ನಾಟಕ ರಾಜ್ಯವು ವೀರಪ್ಪನ್‌ನ ಹಿಡಿಯಲು ಸ್ಪೆಷಲ್ ಟ್ಯಾಸ್ಕ್ ಫೋರ್ಸ್ (ವಿಶೇಷ ಕಾರ್ಯಾಚರಣೆ ಪಡೆ) ಅನ್ನು ರಚಿಸಿತು.
- ಕರ್ನಾಟಕದ ಡೆಪ್ಯುಟಿ ಕನ್ಸರ್ವೇಟರ್ ಶ್ರೀನಿವಾಸ್ ಅವರನ್ನು ಗುಂಡಿಟ್ಟು ಕೊಂದು ತಲೆ ಕಡಿದು ಹಾಕಿದ (ತನ್ನ ತಂಗಿಯ ಆತ್ಮಹತ್ಯೆಗೆ ತೀರಿಸಿಕೊಂಡ ಸೇಡು ಇದಾಗಿತ್ತು). ೩ ವರ್ಷಗಳ ನಂತರ ಶ್ರೀನಿವಾಸ್‌ರವರ ತಲೆಯು ಪತ್ತೆಯಾಯಿತು.
- ೧೯೯೨ - ರಾಂಪುರದ ಪೋಲಿಸ್ ಸ್ಟೇಶನ್ ಮೇಲೆ ದಾಳಿ ನಡೆಸಿ ಐದು ಜನರನ್ನು ಪೋಲಿಸರನ್ನು ಕೊಲೆಗೈದು ಅಲ್ಲಿಂದ ಮದ್ದು, ಗುಂಡು ಮತ್ತು ಅಸ್ತ್ರಗಳನ್ನು ದೋಚಿದ. ಎಸ್ ಟಿ ಎಫ್ ಇದಕ್ಕೆ ಪ್ರತ್ಯುತ್ತರವಾಗಿ ವೀರಪ್ಪನ್ ತಂಡದ ೪ ಜನರನ್ನು ಗುಂಡಿಟ್ಟಿ ಕೊಂದಿತು.
- ಎಸ್ ಟಿ ಎಫ್ ಪೋಲಿಸ್ ಅಧಿಕಾರಿ ಹರಿಕೃಷ್ಣ ಹಾಗೂ ಷಕೀಲ್ ಅಹ್ಮದ್ ಮತ್ತು ೨೫ ಕಾನ್ಸ್ಟಬಲ್‌ಗಳನ್ನು ಸುಳ್ಳು ಮಾಹಿತಿದಾರನ ದೆಸೆಯಿಂದ ಸಿಕ್ಕಿಹಾಕಿಸಲು ಬಲೆ ಬೀಸಿದ. ಈ ತಂಡದ ಆರು ಜನರನ್ನು ಕೈ ಬಾಂಬುಗಳಿಂದ, ಗ್ರೆನೇಡ್‌ಗಳಿಂದ ಕೊಂದನು.
- ೧೯೯೩ - ಪೋಲಿಸರು ಹಾಗು ಸಾಮಾನ್ಯ ಜನರಿಂದ ಕೂಡಿದ ೨೨ ಪ್ರಯಾಣಿಕರಿದ್ದ ಬಸ್ಸನ್ನು ನೆಲ ಬಾಂಬಿನಿಂದ ಉಡಾಯಿಸಿದನು.
- ಎಸ್ ಪಿ ಗೋಪಾಲ್ ಹೊಸೂರ್‌ರ ವಿಶೇಷ ತಂಡದ ೬ ಪೋಲೀಸರನ್ನು ಕೊಂದನು.
- ತಮಿಳುನಾಡು ಸರಕಾರವು ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ಅನ್ನು ವೀರಪ್ಪನ್‌ನ ಹಿಡಿಯಲು ಗೊತ್ತು ಮಾಡಿತು.
- ಬಿಎಸ್‌ಎಫ್ ಹಾಗೂ ಎಸ್‌ಟಿಎಫ್‌ನ ಮಿಶ್ರ ಕಾರ್ಯಾಚರಣೆ ಪಡೆ ೧೯ ವೀರಪ್ಪನ್ ಸಹಚರರನ್ನು ಹಿಡಿದು ೬ ಜನರನ್ನು ಕೊಂದಿತು. ೩ ಜನ ಪೋಲಿಸರು ಹತರಾದರು.
- ವೀರಪ್ಪನ್ ಶರಣಾಗತನಾಗಲು ಹಲವು ಷರತ್ತುಗಳನ್ನು ಮುಂದಿಟ್ಟ. ಆದರೆ ಹುತಾತ್ಮರ ಸಂಬಂಧಿಕರು ವೀರಪ್ಪನ್‌ನ ಷರತ್ತಿನನುಗುಣವಾಗಿ ಸರಕಾರ ಯಾವುದೇ ಕ್ರಮ ತೆಗುದುಕೊಳ್ಳುವುದನ್ನು ವಿರೋದಿಸಿದರು.
- ೧೯೯೬ - ಒಬ್ಬ ಪೋಲೀಸ್ ಮಾಹಿತಿಗಾರನನ್ನು ಕೊಂದನು.
- ಇನ್ನೂ ಹತ್ತು ಪೋಲೀಸ್ ಸಿಬ್ಬಂದಿಗಳನ್ನು ಕೊಂದನು.
- ಪೋಲೀಸ್ ಕಸ್ಟಡಿಯಲ್ಲಿ ತನ್ನ ತಮ್ಮ ಅರ್ಜುನನ್ ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ಸೇಡೆಂಬಂತೆ ಪೋಲಿಸ್ ಅಧಿಕಾರಿ ತಮಿಳ್ಸೆಲ್ವನ್‌ನ ಮೇಲೆ ದಾಳಿ ನಡೆಸಿ ಒಬ್ಬ ಕಾನ್ಸ್ಟಬಲ್‌ಅನ್ನು ಕೊಂದನು.
- ೧೯೯೭ - ತನ್ನ ಮಗುವನ್ನು ಕೊಂದನು.
- ೨೦೦೦ - ಡಾ. ರಾಜ್‌ಕುಮಾರ್ ಅವರನ್ನು ಅವರ ಗಾಜನೂರು ಮನೆಯಿಂದ ಅಪಹರಿಸಿ ೧೦೯ ದಿನಗಳ ಬಳಿಕ ಬಿಟ್ಟನು (ಹಣ ಪಡೆದ ಬಳಿಕ).
- ೨೦೦೨ - ಕರ್ನಾಟಕದ ಮಂತ್ರಿಯೋರ್ವರಾದ ನಾಗಪ್ಪರವರನ್ನು ಅಪಹರಿಸಿ ಕೊಂದನು.
- ೨೦೦೪ - ತಮಿಳುನಾಡು ಸ್ಪೆಶಲ್ ಟ್ಯಾಸ್ಕ್ ಫೋರ್ಸ್‌ನಿಂದ ಸಾಯಿಸಲ್ಪಟ್ಟ.