ಶ್ವೇತ ಭವನ
From Wikipedia
ಶ್ವೇತಭವನ - ಇದು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ. ಇಲ್ಲಿಯವರೆಗೆ ಸುಮಾರು ೩೦ಕ್ಕೂ ಹೆಚ್ಚು ಅಮೆರಿಕದ ಅಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲಿ ಇಲ್ಲಿ ವಾಸಮಾಡಿದ್ದಾರೆ. ಇದು ಇರುವುದು, ೧೬೦೦, ಪೆನ್ಸಿಲ್ವೇನಿಯಾ, ವಾಷಿಂಗ್ಟನ್ ಡಿ.ಸಿ.ಯಲ್ಲಿ.
ಶ್ವೇತಭವನದ ಮುಖ್ಯ ವಾಸ್ತುಶಿಲ್ಪಿ ಬೆಂಜಮಿನ್ ಲ್ಯಾಟ್ರೇಬ. ಶ್ವೇತಭವನದಕ್ಕೆ ಮೆರಗು ಬಂದಿದ್ದು ಖ್ಯಾತ ವಾಸ್ತುಶಿಲ್ಪಿ ಜೇಮ್ಸ್ ಹೋಬನ್‍ನಿಂದ. ವಾಸ್ತುಶಿಲ್ಪ ಪ್ರದರ್ಶನದಲ್ಲಿ ಸಾಕಷ್ಟು ಪ್ರಶಸ್ತಿ ಗೆದ್ದು ಹೆಸರಾಗಿದ್ದ ಈತ ಶ್ವೇತಭವನದ ವಿನ್ಯಾಸಗಳನ್ನು ಬದಲಿಸಿ ಅದಕ್ಕೆ ಮೆರಗು ತಂದ. ೧೮೧೪ರಲ್ಲಿ ಇದನ್ನು ಬ್ರಿಟಿಷರು ಸುಟ್ಟು ಹಾಕಿದರು. ಆಗ ಜೇಮ್ಸ್ ಹೋಬನ್ ಶ್ವೇತಭವನವನು ಮೊದಲಿನ ಘನತೆ, ಗಾಂಭೀರ್ಯದೊಂದಿಗೆ ಅಮೋಘವಾದ ಕಟ್ಟಡವನ್ನು ನಿರ್ಮಿಸಿದನು. ನಂತರ ೧೯೦೨, ೧೯೪೮ ರಲ್ಲಿ ಮತ್ತಷ್ಟು ಸುಧಾರಣೆಗಳನ್ನು ಕಂಡಿತು.