ಹಣ
From Wikipedia
ಈ ಲೇಖನವನ್ನು Money ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
ಅರ್ಥಶಾಸ್ತ್ರದ ಪ್ರಕಾರ ಹಣಕ್ಕೆ ಅನೇಕ ಅರ್ಥಗಳಿವೆ. ವ್ಯವಹಾರದಲ್ಲಿ ವ್ಯಕ್ತಿಗಳಿಗೆ ವಸ್ತುಗಳನ್ನು ಕೊಳ್ಳುವ ಅಥವಾ ಮಾರುವ ಸಂದರ್ಭಗಳಲ್ಲಿ ಹಣವನ್ನು ಬದಲಿ ಮಾಧ್ಯಮವಾಗಿ ಬಳಸುತ್ತಾರೆ. ಸಾಮಾನ್ಯ ಬಳಕೆಯಲ್ಲಿ ಹಣವೆಂದರೆ, ಚಲಾವಣೆಯಲ್ಲಿರುವ, ರಾಷ್ಟ್ರೀಯ ಸರ್ಕಾರಗಳು ಅಥವಾ ಬ್ಯಾಂಕುಗಳಿಂದ ಮುದ್ರಿತವಾದ ನೋಟುಗಳು ಹಾಗು ನಾಣ್ಯಗಳು. ಪ್ರತೀ ದೇಶದಲ್ಲಿಯೂ, ಆ ದೇಶದಲ್ಲಿ ಚಲಾಯಿತವಾಗುವ ನೋಟುಗಳು ಹಾಗು ನಾಣ್ಯಗಳಿಗೆ ಶಾಸನಬದ್ಧ ಹಣವೆನ್ನುತ್ತಾರೆ.
[ಬದಲಾಯಿಸಿ] ಇತಿಹಾಸ
ಹಣ ತಾನಾಗಿಯೆ ವಿರಳವಾಗಿರಬೇಕು. ಹಾಗಾಗಿ ಮುಂಚಿನ ಕಾಲಗಳಲ್ಲಿ ಆ ಸಂಸ್ಕೃತಿಗೆ ವಿರಳವಾದ ವಸ್ತುಗಳನ್ನು (ಉದಾ.ಕಪ್ಪೆ ಚಿಪ್ಪು, ಚಿನ್ನ, ಇತ್ಯಾದಿ) ಹಣದಂತೆ ಉಪಯೋಗಿಸಲ್ಪಡುತ್ತಿದ್ದವು. ಸುಮಾರ ೧೦೦,೦೦೦ ವರ್ಷಗಳ ಮುಂಚಿನಿಂದಲೂ ಕೆಲ ರೀತಿಯ ಹಣ ಉಪಯೋಗಿಸಲ್ಪಟ್ಟಿದೆಯೆಂದು ಊಹಿಸಲಾಗಿದೆ [೧]