ಅನಂತನಾಗ್
From Wikipedia
ಅನಂತನಾಗ್ - ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು ಮತ್ತು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿದ್ದವರು.
ಪರಿವಿಡಿ |
[ಬದಲಾಯಿಸಿ] ಜೀವನ
ಅನಂತನಾಗ್ ಅವರ ಸಹೋದರ ಶಂಕರನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್. ಇವರಿಬ್ಬರೂ ಚಲನಚಿತ್ರರಂಗದಲ್ಲಿ, ಸಕ್ರಿಯರಾಗಿದ್ದವರು.
ಮೂಲತಃ ರಂಗಭೂಮಿಯಿಂದ ಬಂದಂತಹ ಅನಂತನಾಗ್, ನಾಗರಕಟ್ಟೆ ವಂಶಸ್ಥರು. ಮಹಾರಾಷ್ಟ್ರದಲ್ಲಿ ಆರಂಭವಾದ ವೃತ್ತಿರಂಗಭೂಮಿಯ ಕೆಲಸ, ನಂತರ ಕರ್ನಾಟಕಕ್ಕೆ ವರ್ಗವಾಗಿ, ಕ್ರಮೇಣ ಕನ್ನಡ ಚಿತ್ರರಂಗ ಸೇರಿದರು. ಕನ್ನಡ ಭಾಷೆಯಲ್ಲದೇ, ಭಾರತದ ಹಲವಾರು ಭಾಷೆಗಳಾದ ಹಿಂದಿ, ತೆಲುಗು, ಮಲಯಾಳಂ, ಮರಾಠಿ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಆಂಗ್ಲ ಭಾಷೆಯಲ್ಲಿನ ಸ್ಟಂಬಲ್ ಚಿತ್ರದಲ್ಲಿ ಮುಖ್ಯಪಾತ್ರವನ್ನು ನಿರ್ವಹಿಸಿದ್ದಾರೆ. ಭಾರತದ ಖ್ಯಾತ ಧಾರಾವಾಹಿಗಳಲ್ಲೊಂದಾದ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
[ಬದಲಾಯಿಸಿ] ಚಿತ್ರರಂಗದ ಬದುಕು
ಅನಂತನಾಗ್ ಅವರ ಪ್ರಥಮ ಕನ್ನಡ ಚಲನಚಿತ್ರ ೧೯೭೩ರಲ್ಲಿ ಬಿಡುಗಡೆಯಾದ ಸಂಕಲ್ಪ. ೧೯೭೫ರಲ್ಲಿ ತೆರೆಕಂಡ ಇವರ ಎರಡನೇ ಚಿತ್ರವಾದ ಹಂಸಗೀತೆಯು ಇವರಿಗೆ ಬಹಳಷ್ಟು ಖ್ಯಾತಿಯನ್ನು ಗಳಿಸಿಕೊಟ್ಟಿತು. ತರಾಸು ಅವರ ಕಾದಂಬರಿ ಆಧಾರಿತವಾದ ಈ ಸಂಗೀತ ಪ್ರಧಾನ ಚಿತ್ರದಲ್ಲಿ ಅನಂತನಾಗ್ ಸಂಗೀತ ವಿದ್ವಾನ್ ವೆಂಕಟಸುಬ್ಬಯ್ಯನವರ ಪಾತ್ರ ನಿರ್ವಹಿಸಿದ್ದರು.
[ಬದಲಾಯಿಸಿ] ರಾಜಕಾರಣದ ಬದುಕು
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ, ಕರ್ನಾಟಕ ಸರ್ಕಾರದಲ್ಲಿನ ಶಾಸಕರಾದ ಅನಂತನಾಗ್, ನಂತರ ಜೆ.ಹೆಚ್.ಪಟೇಲ್ ಅವರ ಮಂತ್ರಿಮಂಡಲದಲ್ಲಿ ಮಂತ್ರಿಗಳಾಗಿದ್ದರು.
[ಬದಲಾಯಿಸಿ] ಅನಂತನಾಗ್ ಅಭಿನಯದ ಕನ್ನಡ ಚಿತ್ರಗಳು
[ಬದಲಾಯಿಸಿ] ಅನಂತನಾಗ್ ಅಭಿನಯದ ಹಿಂದಿ ಚಿತ್ರಗಳು
- ಕಲಿಯುಗ್
- ಗೆಹ್ರಾಯುನ್
- ಉತ್ಸವ್
[ಬದಲಾಯಿಸಿ] ಅನಂತನಾಗ್ ಅಭಿನಯದ ಆಂಗ್ಲ ಚಿತ್ರಗಳು
- ಸ್ಟಂಬಲ್
[ಬದಲಾಯಿಸಿ] ಕನ್ನಡ ಚಲನಚಿತ್ರ ನಾಯಕರು
ಸುಬ್ಬಯ್ಯ ನಾಯ್ಡು | ಉದಯಕುಮಾರ್ | ಕಲ್ಯಾಣಕುಮಾರ್ | ಡಾ. ರಾಜ್‌ಕುಮಾರ್ | ಗಂಗಾಧರ್ | ಡಾ. ವಿಷ್ಣುವರ್ಧನ್ | ರಾಜೇಶ್ | ಅಶೋಕ್ | ಅಂಬರೀಶ್ | ಶ್ರೀನಾಥ್ | ಪ್ರಭಾಕರ್ | ಅನಂತ ನಾಗ್ | ಶಂಕರ್ ನಾಗ್ | ಲೋಕೇಶ್ | ಮಾನು | ಕಾಶೀನಾಥ್ | ಮುರಳಿ(ಪ್ರೇಮಪರ್ವ) | ಚರಣ್ ರಾಜ್ | ವಿನೋದ್ ರಾಜ್ | ಶ್ರೀಧರ್ | ರಾಮಕೃಷ್ಣ | ಅರ್ಜುನ್ ಸರ್ಜಾ |ದೇವರಾಜ್ | ಸಾಯಿಕುಮಾರ್ | ರಾಮ್‍ಕುಮಾರ್ | ಥ್ರಿಲ್ಲರ್ ಮಂಜು | ಎಸ್.ನಾರಾಯಣ್ | ಜಗ್ಗೇಶ್ | ಉಪೇಂದ್ರ | ರವಿಚಂದ್ರನ್ | ಸುನಿಲ್ |ರಮೇಶ್ | ಸುದೀಪ್ | ಶಿವರಾಜ್‍ಕುಮಾರ್ | ಪುನೀತ್ ರಾಜ್‍ಕುಮಾರ್ | ರಾಘವೇಂದ್ರ ರಾಜ್ ಕುಮಾರ್ | ಮುರಳಿ | ವಿಜಯ ರಾಘವೇಂದ್ರ | ದರ್ಶನ್ ತೂಗುದೀಪ್ | ಸುನಿಲ್ ರಾವ್ | ಧ್ಯಾನ್| ಪ್ರೇಂ |ರಜನೀಕಾಂತ್