ಜೋನ್ ಆಫ್ ಆರ್ಕ್
From Wikipedia
ಜೋನ್ ಆಫ್ ಆರ್ಕ್ (ಜನವರಿ ೬, ೧೪೧೨ - ಮೇ ೩೦, ೧೪೩೧) (ಫ್ರೆಂಚ್‌ನಲ್ಲಿ Jeanne d'Arc, Jehanne la Pucelle, ಹಾಗೂ ಆರ್ಲಿಯನ್ಸ್‌ನ ಕೆಲಸಗಾತಿ ಫ್ರಾನ್ಸ್‌ನ ರಾಷ್ಟ್ರೀಯ ನಾಯಕಿ, ಕ್ಯಾಥೊಲಿಕ್ ಚರ್ಚ್‌ನ ಸಂತರಲ್ಲೊಬ್ಬಳು.ನೂರು ವರ್ಷಗಳ ಫ್ರೆಂಚ್ - ಇಂಗ್ಲಿಷ್ ಯುಧ್ಧದಲ್ಲಿ ಇವಳು ಫ್ರಾನ್ಸೀಸಿ ಸೈನ್ಯವನ್ನು ಇಂಗ್ಲೀಷರ ವಿರುಧ್ಧ ಮುನ್ನಡೆಸಿ ಕೊನೆಗೊಮ್ಮೆ ಇಂಗ್ಲೀಷರ ವಶಕ್ಕೆ ಸಿಕ್ಕಿ ಕೊಲ್ಲಲ್ಪಟ್ಟಳು.
[ಬದಲಾಯಿಸಿ] ಜೀವನ
Jeanne d'Arc ಅಥವಾ Jehanne Darc ಡೊಮ್ರೆಮಿಯ ಕೃಷಿಕರ ಕುಟುಂಬದಲ್ಲಿ ಜನಿಸಿದಳು. ಡೊಮ್ರೆಮಿ ಈಗಿನ ಲೊರ್ರೈನ್‌ನಲ್ಲಿರುವ ಒಂದು ಹಳ್ಳಿ. ಆದರೆ ಹಿಂದಿನ ಕಾಲದಲ್ಲಿ ಬ್ಯಾರ್ರಿ ಡಚಿಯ ಒಂದು ಭಾಗವಾಗಿತ್ತು; ಆಂಗ್ಲ-ಬರ್ಗುಂಡಿಯವರಿಗೆ ವಿಧೇಯನಾದ ಡ್ಯೂಕ್ ಆಳ್ವಿಕೆಯ ಫ್ರಾನ್ಸ್‌ನ ಭಾಗವಾಗಿತ್ತು ಅದು.ಬಹುಪಾಲು ಭಿನ್ನಮತದಿಂದ ಛಿದ್ರವಾಗಿದ್ದ ಪ್ರಾನ್ಸ್, ಆಂಗ್ಲರಿಗೆ ಸಂಪತ್ತಾಯಿತು.