ಚಾರ್ಲ್ಸ್ ಡಾರ್ವಿನ್
From Wikipedia
ಈ ಲೇಖನವನ್ನು Charles Darwin ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
ತಮ್ಮ ೫೧ನೇ ವಯಸ್ಸಿನಲ್ಲಿ - ಥ ಆರಿಜಿನ್ ಆಫ್ ಸ್ಪೀಶೀಸ್ ಪುಸ್ತಕ ಪ್ರಕಟಣೆಯ ಸಮಯದಲ್ಲಿ |
|
ಜನನ | ಫೆಬ್ರುವರಿ ೧೨, ೧೮೦೯ ಮೌನ್ಟ್ ಹೌಸ್, ಶ್ರೂವ್ಸ್‍ಬರಿ, ಶ್ರಾಪ್‍ಶೈರ್, ಇಂಗ್ಲೆಂಡ್ |
---|---|
ಮರಣ | ಏಪ್ರಿಲ್ ೧೯, ೧೮೮೨ ಡೌನ್ ಹೌಸ್, ಕೆಂಟ್, ಇಂಗ್ಲೆಂಡ್ |
ನಿವಾಸ | ಇಂಗ್ಲೆಂಡ್ |
ರಾಷ್ಟ್ರೀಯತೆ | ಇಂಗ್ಲೆಂಡ್ |
ಕಾರ್ಯಕ್ಷೇತ್ರ | Naturalist |
ಕೆಲಸ ಮಾಡಿದ ಸ್ಥಳ | Royal Geographical Society |
ಓದಿದ ವಿದ್ಯಾಲಯ | ಎಡಿನ್‍ಬ್ರೊ ವಿಶ್ವವಿದ್ಯಾಲಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ |
Academic Advisor | ಆಡಮ್ ಸೆಡ್ಜ್‍ವಿಕ್ |
ಪ್ರಸಿದ್ಧತೆಗೆ ಕಾರಣ | ಥ ಆರಿಜಿನ್ ಆಫ್ ಸ್ಪೀಶೀಸ್, ವಿಕಾಸವಾದ |
ಪ್ರಮುಖ ಪ್ರಶಸ್ತಿಗಳು | Royal Medal (1853) Wollaston Medal (1859) ಕೊಪ್ಲೆ ಪದಕ (೧೮೬೪) |
ಧರ್ಮ | Church of England, though Unitarian family background, Agnostic after 1851. |
ಚಾರ್ಲ್ಸ್ ಡಾರ್ವಿನ್ (ಫೆಬ್ರುವರಿ ೧೨ ೧೮೦೯ ರಿಂದ ಏಪ್ರಿಲ್ ೧೯ ೧೮೮೨) ಇಂಗ್ಲೆಂಡ್ ದೇಶದ ಪ್ರಸಿದ್ಧ ಜೀವವಿಜ್ಞಾನಿ. ಈತನ ವಿಕಾಸವಾದ ಆಧುನಿಕ ಜೀವವಿಜ್ಞಾನದ ಬುನಾದಿಯಾಗಿದೆ.
[ಬದಲಾಯಿಸಿ] ಜೀವನ
ಡಾರ್ವಿನ್‍ನ ಜನನವಾಗಿದ್ದು ಇಂಗ್ಲೆಂಡ್ ದೇಶದ ಶ್ರೂಸ್ಬರಿ ಎಂಬಲ್ಲಿ ಫೆಬ್ರುವರಿ ೧೨, ೧೮೦೯ ರಂದು. ಶ್ರೀಮಂತ ವೈದ್ಯರಾದ ರಾಬರ್ಟ್ ಡಾರ್ವಿನ್ ಮತ್ತು ಸೂಸಾನಾ ಡಾರ್ವಿನ್ ದಂಪತಿಗಳ ೬ ಮಕ್ಕಳಲ್ಲಿ ಐದನೆಯವನು. ತಾಯಿಯ ಮೃತ್ಯು ಡಾರ್ವಿನ್ ಎಂಟನೇ ವಯಸ್ಸಿನಲ್ಲಿ.
ತಂದೆಯ ವೈದ್ಯವೃತ್ತಿಯಲ್ಲಿ ಸಹಾಯ ಮಾಡುತ್ತಿದ್ದ ಡಾರ್ವಿನ್ ೧೮೨೫ರಲ್ಲಿ ಎಡಿನ್‍ಬರೋ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ನಡೆಸಿದರು. ಶಸ್ತ್ರಚಿಕಿತ್ಸೆಯ ನಿರ್ದಯತೆಯನ್ನು ತಾಳಲಾರದೆ ತಮ್ಮ ವೈದ್ಯಕೀಯ ವಿದ್ಯಾಭ್ಯಾಸವನ್ನು ಕಡೆಗಣಿಸಿದರು. ಜಾನ್ ಎಡ್ಮಂಡ್ ಸ್ಟೋನ್‍ರವರಿಂದ ಟ್ಯಾಕ್ಸಿಡರ್ಮಿ (ಪ್ರಾಣಿಗಳ ಚರ್ಮದೊಳಗೆ ಮೆತ್ತೆ ತುಂಬಿ ಸಜೀವ ಪ್ರಾಣಿಯಂತೆ ಮಾಡುವ ಕಲೆ) ಯನ್ನು ಕಲಿತರು. ವಿದ್ಯಾಭ್ಯಾಸದ ಎರಡನೇ ವರ್ಷದಲ್ಲಿ ನಿಸರ್ಗವಾದಿಗಳ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು. ರಾಬರ್ಟ್ ಎಡ್ಮಂಡ್ ಗ್ರಾಂಟ್ನ ಪಟ್ಟ ಶಿಷ್ಯರಾದರು. ಗ್ರಾಂಟ್‍ನು ಜಾನ್ ಬಾಪ್ಟಿಸ್ಟ್ ಲಮಾರ್ಕ್ ಮತ್ತು ಚಾರ್ಲ್ಸ್ ಡಾರ್ವಿನ್‍ರ ಅಜ್ಜರಾದ ಎರಾಸ್ಮಸ್‍ರವರ ವಿಕಾಸವಾದದ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುತ್ತಿದ್ದನು.