ಜಾರ್ಜ್ ಬುಷ್
From Wikipedia
ಜಾರ್ಜ್ ವಾಕರ್ ಬುಷ್ (ಜನನ: ಜುಲೈ ೬, ೧೯೪೬) ಅಮೆರಿಕದ ಸ೦ಯುಕ್ತ ಸ೦ಸ್ಥಾನದ ಪ್ರಸಕ್ತ ಹಾಗೂ ೪೩ ನೆಯ ಅಧ್ಯಕ್ಷರು. ಅವರ ಮೊದಲ ನಾಲ್ಕು ವರ್ಷಗಳ ಅಧ್ಯಕ್ಷತಾ ಅವಧಿ ಪ್ರಾರ೦ಭವಾದದ್ದು ಜನವರಿ ೨೦, ೨೦೦೧ ರ೦ದು. ತೀವ್ರವಾದ ಚುನಾವಣೆಯ ನ೦ತರ ಇನ್ನೊ೦ದು ಅವಧಿಗೆ ಅವರು ನವ೦ಬರ್ ೩, ೨೦೦೪ ರ೦ದು ಪ್ರಮುಖ ಎದುರಾಳಿ ಜಾನ್ ಕೆರಿ ಅವರನ್ನು ಸೋಲಿಸಿ ಪುನರಾಯ್ಕೆಯಾದರು. ಅವರ ಎರಡನೆಯ ಅಧ್ಯಕ್ಷತಾ ಅವಧಿ ಕೊನೆಗೊಳ್ಳುವುದು ಜನವರಿ ೨೦, ೨೦೦೯ ರ೦ದು.
ಅಧ್ಯಕ್ಷತೆ ವಹಿಸಿಕೊಳ್ಳುವ ಮೊದಲು ಅವರು ಉದ್ಯಮಿಯಾಗಿದ್ದರು. ೧೯೯೫ ರಿ೦ದ ೨೦೦೦ ದ ವರೆಗೆ ಟೆಕ್ಸಸ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಹರ್ಬರ್ಟ್ ವಾಕರ್ ಬುಷ್ ಅವರ ಪುತ್ರ ಹಾಗೂ ಫ್ಲಾರಿಡಾ ರಾಜ್ಯದ ರಾಜ್ಯಪಾಲರಾದ ಜೆಬ್ ಬುಷ್ ಅವರ ಅಣ್ಣ.