ನೆಪ್ಚೂನ್
From Wikipedia
ನೆಪ್ಚೂನ್ - ಇದು ಸೌರಮಂಡಲದ ಎಂಟನೆಯ ಮತ್ತು ಸೂರ್ಯನಿಂದ ಅತಿ ಹೆಚ್ಚು ದೂರದಲ್ಲಿರುವ ಗ್ರಹವಾಗಿದೆ. ಇದು ವ್ಯಾಸದಲ್ಲಿ ೪ನೆಯ ಮತ್ತು ದ್ರವ್ಯರಾಶಿಯಲ್ಲಿ ೩ನೆಯ ಅತಿ ದೊಡ್ಡ ಗ್ರಹವಾಗಿದೆ; ಭೂಮಿಯ ೧೭ ಪಟ್ಟು ದ್ರವ್ಯರಾಶಿಯನ್ನು ಹೊಂದಿರುವ ನೆಪ್ಚೂನ್ ಗ್ರಹವು ಭೂಮಿಯ ೧೪ ಪಟ್ಟು ದ್ರವ್ಯರಾಶಿ ಹೊಂದಿರುವ ಯುರೇನಸ್ಗಿಂತ ಸ್ವಲ್ಪ ಹೆಚ್ಚು ಭಾರಿಯಾಗಿದೆ. ಆದರೆ, ಹೆಚ್ಚಿನ ಸಾಂದ್ರತೆಯ ಕಾರಣ, ಇದು ಯುರೇನಸ್‌ಗಿಂತ ಗಾತ್ರದಲ್ಲಿ ಸ್ವಲ್ಪ ಚಿಕ್ಕದು. ಈ ಗ್ರಹಕ್ಕೆ ರೋಮನ್ನರ ಸಾಗರ ದೇವತೆಯ ಹೆಸರನ್ನು ಇಡಲಾಗಿದೆ. ಇದರ ಕಕ್ಷೆಯ ಒಂದು ಭಾಗವು (ಸುಮಾರು ಪ್ರತಿ ೨೫೦ ವರ್ಷಗಳಲ್ಲಿ ೧೦ ವರ್ಷಗಳಷ್ಟು) ಇದನ್ನು ಪ್ಲುಟೊದ ಕಕ್ಷೆಗಿಂತ ಹೊರಗೆ ಕೊಂಡೊಯ್ಯುತ್ತದೆ.
ಪರಿವಿಡಿ |
[ಬದಲಾಯಿಸಿ] ಪರಿಚಯ
ನೆಪ್ಚೂನಿನ ವಾಯುಮಂಡಲವು ಮುಖ್ಯವಾಗಿ ಜಲಜನಕ ಮತ್ತು ಹೀಲಿಯಂ ಗಳಿಂದ ಕೂಡಿದ್ದು, ಗ್ರಹಕ್ಕೆ ನೀಲಿ ಬಣ್ಣವನ್ನು ಕೊಡುವ ಮೀಥೇನ್‌ನನ್ನೂ ಸ್ವಲ್ಪ ಪ್ರಮಾಣದಲ್ಲಿ ಹೊಂದಿದೆ. ಯುರೇನಸ್ ಕೂಡ ಸುಮಾರು ನೆಪ್ಚೂನಿನಷ್ಟೇ ಹೀಲಿಯಂನ್ನು ಹೊಂದಿದ್ದರೂ, ನೆಪ್ಚೂನ್‌ನ ನೀಲಿ ಬಣ್ಣವು ಯುರೇನಸ್‌ಗಿಂತ ಹೆಚ್ಚು ಗಾಢವಾಗಿದೆ. ಆದ್ದರಿಂದ, ಇನ್ನೂ ತಿಳಿದಿಲ್ಲದ ಯಾವುದೋ ವಸ್ತುವು ಈ ತೀವ್ರ ನೀಲಿ ಬಣ್ಣವನ್ನು ಉಂಟುಮಾಡುತ್ತಿದೆ ಎಂದು ಹೇಳಲಾಗಿದೆ.*[೧]* ಸುಮಾರು ೨,೫೦೦ ಕಿ.ಮೀ./ಪ್ರತಿ ಘಂ. (೧,೫೦೦ ಮೈಲಿ/ಪ್ರತಿ ಘಂ) ವೇಗದಲ್ಲಿ, ನೆಪ್ಚೂನ್‌ನ ಮಾರುತಗಳು ಸೌರಮಂಡಲದಲ್ಲೇ ಅತ್ಯಂತ ವೇಗದ ಮಾರುತಗಳಾಗಿವೆ. ೧೯೮೯ರ ವಾಯೇಜರ್ ೨ರ ಯಾತ್ರೆಯ ಸಮಯದಲ್ಲಿ, ನೆಪ್ಚೂನ್‌ನ ದಕ್ಷಿಣಾರ್ಧಗೋಳದಲ್ಲಿ, ಗುರು ಗ್ರಹದ ಮೇಲಿನ ಬೃಹತ್ ಕೆಂಪು ಚುಕ್ಕೆಯಂತೆ ಒಂದು ಬೃಹತ್ ಗಾಢ ಚುಕ್ಕೆಯು ಇದ್ದಿತು. ಗ್ರಹವು ಸೂರ್ಯನಿಂದ ಬಹಳ ದೂರದಲ್ಲಿರುವುದರಿಂದ, ನೆಪ್ಚೂನ್‌ನ ಮೋಡದ ಪದರದ ತಾಪಮಾನವು ಸುಮಾರು −೨೧೦ ಕೆ. (−೩೪೬ಫ್ಯಾ.) ಗಳಷ್ಟಿದ್ದು, ಸೌರಮಂಡಲದಲ್ಲೇ ಅತಿ ಕಡಿಮೆ ತಾಪಮಾನಗಳಲ್ಲಿ ಸೇರಿದೆ. ಆದರೆ, ೭,೦೦೦ ಕೆ. (೧೩,೦೦೦ ಫ್ಯಾ) ತಾಪಮಾನದಲ್ಲಿರುವ ನೆಪ್ಚೂನ್‌ನ ಒಳಭಾಗವು ಸೂರ್ಯನ ಮೇಲ್ಮೈಗಿಂತ ಬಿಸಿಯಾಗಿದೆ. ಇದರ ಕಾರಣ ನೆಪ್ಚೂನ್‌ನ ಒಳಭಾಗದಲ್ಲಿ ಕಲ್ಲು-ಬಂಡೆಗಳು ಮತ್ತು ಅನಿಲಗಳು ಅಪಾರ ಶಾಖವನ್ನು ಹೊಂದಿರುವುದು.
ನೆಪ್ಚೂನ್‌ನ ಸುತ್ತ ಮಂದವಾದ ತಿಳಿ ನೀಲಿ ಬಣ್ಣದ ಉಂಗುರಗಳನ್ನು ಕಂಡುಹಿಡಿಯಲಾಗಿದ್ದರೂ, ಇವು ಶನಿಯ ಉಂಗುರಗಳಿಗಿಂತ ಬಹಳ ಕ್ಷುಲ್ಲಕವಾಗಿವೆ. ಈ ಉಂಗುರಗಳನ್ನು ಮೊದಲು ಕಂಡುಹಿಡಿದಾಗ ಇವು ಪೂರ್ಣ ವೃತ್ತಾಕಾರದಲ್ಲಿ ಇಲ್ಲವೆಂದು ಭಾವಿಸಲಾಗಿತ್ತು. ಆದರೆ, ನಂತರದ ವಾಯೇಜರ್ ೨ರ ಮಾಹಿತಿಯ ಪ್ರಕಾರ ಈ ಉಂಗುರಗಲು ಪೂರ್ಣ ವೃತ್ತಗಳೇ ಎಂದು ತಿಳಿದುಬಂದಿತು. ನೆಪ್ಚೂನ್ ಗ್ರಹಕ್ಕೆ ೧೩ ದೃಢೀಕರಿತ ನೈಸರ್ಗಿಕ ಉಪಗ್ರಹಗಳಿವೆ. ನೆಪ್ಚೂನ್‌ನ ಅತಿ ದೊಡ್ಡ ಉಪಗ್ರಹವಾದ ಟ್ರಿಟಾನ್ ಪ್ರತಿಗಾಮಿ ಚಲನೆಯನ್ನು ಹೊಂದಿರುವುದಲ್ಲದೆ, ವಿಪರೀತ ಶೀತ (೩೮ಕೆ.) ಮತ್ತು ಅತಿ ವಿರಳವಾದ (೧೪ ಮೈಕ್ರೋಬಾರ್) ವಾಯುಮಂಡಲಕ್ಕೂ ಪ್ರಸಿದ್ಧವಾಗಿದೆ.
ಸೆಪ್ಟೆಂಬರ್ ೨೩, ೧೮೪೬ರಂದು ಕಂಡುಹಿಡಿಯಲಾದ ನೆಪ್ಚೂನ್, ನೇರ ವೀಕ್ಷಣೆಯಲ್ಲದೆ ಗಣಿತದ ಲೆಕ್ಕಾಚಾರಗಳಿಂದ ಕಂಡುಹಿಡಿಯಲಾದ ಮೊದಲ ಗ್ರಹ. ಯುರೇನಸ್ನ ಕಕ್ಷೆಯಲ್ಲಿನ ಸೂಕ್ಷ್ಮ ಬದಲಾವಣೆಗಳಿಂದ ಖಗೋಳಶಾಸ್ತ್ರಜ್ಞರು ನೆಪ್ಚೂನ್‌ನ ಅಸ್ತಿತ್ವವನ್ನು ತರ್ಕಿಸಿದರು. ಆಗಸ್ಟ್ ೨೫, ೧೯೮೯ರಂದು ನೆಪ್ಚೂನ್‌ನ ಬಳಿ ಹಾರಿಹೋದ ವಾಯೇಜರ್ ೨ ನೌಕೆಯು ಇದುವರೆಗೂ ಈ ಗ್ರಹವನ್ನು ಸಮೀಪಿಸಿರುವ ಏಕೈಕ ನೌಕೆ. In 2003, there was a proposal to NASA's "Vision Missions Studies" to implement a "Neptune Orbiter with Probes" mission that does Cassini-level science without fission-based electric power or propulsion. The work is being done in conjunction with JPL and the California Institute of Technology.[೨]
[ಬದಲಾಯಿಸಿ] ಆವಿಷ್ಕಾರ
ನೆಪ್ಚೂನ್ ನ್ನು ಡಿಸೆಂಬರ್ ೨೮, ೧೬೧೨ ಮತ್ತು ಜನವರಿ ೨೭, ೧೬೧೩ ದಿನಾಂಕಗಳಂದು ಗೆಲಿಲಿಯೊ ವೀಕ್ಷಿಸಿದನೆಂದು ಅವನ ಖಗೋಳ ಚಿತ್ರಗಳು ಹೇಳುತ್ತವೆ; ಆದರೆ, ಈ ಎರಡೂ ದಿನಗಳಂದು ನೆಪ್ಚೂನ್ ಗ್ರಹವು ಗುರುಗ್ರಹದ ನಿಕಟದಲ್ಲಿ ಕಂಡಿದ್ದರಿಂದ, ನೆಪ್ಚೂನ್ ಒಂದು ಸ್ಥಿರ ನಕ್ಷತ್ರವೆಂದು ಗೆಲಿಲಿಯೋ ಭಾವಿಸಿದನು. ನೆಪ್ಚೂನ್ ಒಂದು ಗ್ರಹವೆಂದು ಗೆಲಿಲಿಯೋ ಕಂಡುಹಿಡಿಯಲಿಲ್ಲವಾದ್ದರಿಂದ, ಅವನನ್ನು ಇದರ ಆವಿಷ್ಕಾರಕನೆಂದು ಹೇಳಲು ಸಾಧ್ಯವಿಲ್ಲ. ಡಿಸೆಂಬರ್ ೧೯೧೨ರಲ್ಲಿ ಅವನು ನೆಪ್ಚೂನನ್ನು ಮೊದಲಬಾರಿಗೆ ಅವಲೋಕಿಸಿದಾಗ, ಅದರ ಪರಿಭ್ರಮಣೆಯು ಅಂದೇ ಪ್ರತಿಗಾಮಿ ಚಲನೆಯನ್ನು ಪ್ರಾರಂಭಿಸಿದ್ದರಿಂದ, ಅದು ಆಗಸದಲ್ಲಿ ಚಲನೆಯಿಲ್ಲದೆ ಸ್ಥಿರವಾಗಿದ್ದಂತೆ ಕಂಡುಬಂದಿತು;[ಸಾಕ್ಷ್ಯಾಧಾರ ಬೇಕಾಗಿದೆ] ನೆಪ್ಚೂನ್ ಆಗತಾನೇ ತನ್ನ ವಾರ್ಷಿಕ ಪ್ರತಿಗಾಮಿ ಆವರ್ತವನ್ನು ಹೊಕ್ಕಿತ್ತು. ಇದಲ್ಲದೆ, ಗೆಲಿಲಿಯೋನ ಸಣ್ಣ ದೂರದರ್ಶಕದಿಂದ ನೆಪ್ಚೂನ್‌ನ ನಿಧಾನವಾದ ಅಕ್ಷೀಯ ಪರಿಭ್ರಮಣವನ್ನು ಕಂಡುಹಿಡಿಯಲೂ ಆಗುತ್ತಿರಲಿಲ್ಲ.
೧೮೨೧ರಲ್ಲಿ, ಆಲೆಕ್ಸಿಸ್ ಬೂವರ್ಡ್ನು ಯುರೇನಸನ ಲಕ್ಷೆಯ ಖಗೋಳ ಲೆಕ್ಕಾಚಾರಗಳನ್ನು ಪ್ರಕಾಶಿಸಿದನು*[೩]*. ತದನಂತರದ ಅವಲೋಕನೆಗಳು ಈ ಲೆಕ್ಕಾಚಾರಗಳಿಗಿಂತ ಬಹಳ ಭಿನ್ನವಾಗಿ ಕಂಡುಬಂದವು. ಈ ಭಿನ್ನತೆಯು, ನಿಕಟದಲ್ಲಿ ಬೇರೊಂದು ಆಕಾಶಕಾಯದ ಅಸ್ತಿತ್ವದ ಬಗ್ಗೆ ಅನುಮಾನಿಸಲು ಬೂವರ್ಡ್‌ನನ್ನು ಪ್ರೇರೇಪಿಸಿತು. ಯುರೇನಸ್ನ ಚಲನೆಯನ್ನು ಸಮಂಜಸವಾಗಿ ವಿವರಿಸುವಂತಹ ಎಂಟನೆಯ ಗ್ರಹದ ಕಕ್ಷೆಯನ್ನು ೧೮೪೩ರಲ್ಲಿ ಜಾನ್ ಕೌಚ್ ಆಡಮ್ಸ್ ಲೆಕ್ಕಾಚಾರ ಮಾಡಿ ಕಂಡುಹಿಡಿದನು.
In 1846, Urbain Le Verrier, independently of Adams, produced his own calculations but also experienced difficulties in encouraging any enthusiasm in his compatriots. However, in the same year, John Herschel started to champion the mathematical approach and persuaded James Challis to search for the planet.
After much procrastination, Challis began his reluctant search in July 1846. However, in the meantime, Le Verrier had convinced Johann Gottfried Galle to search for the planet. Though still a student at the Berlin Observatory, Heinrich d'Arrest suggested that a recently drawn chart of the sky, in the region of Le Verrier's predicted location, could be compared with the current sky to seek the displacement characteristic of a planet, as opposed to a fixed star. Neptune was discovered that very night, September 23, 1846, within 1 of where Le Verrier had predicted it to be, and about 10 from Adams' prediction. Challis later realized that he had observed the planet twice in August, failing to identify it owing to his casual approach to the work.
In the wake of the discovery, there was much nationalistic rivalry between the French and the British over who had priority and deserved credit for the discovery. Eventually an international consensus emerged that both Le Verrier and Adams jointly deserved credit. However, the issue is now being re-evaluated by historians with the rediscovery in 1998 of the "Neptune papers" (historical documents from the Royal Greenwich Observatory), which had apparently been misappropriated by astronomer Olin Eggen for nearly three decades and were only rediscovered (in his possession) immediately after his death. After reviewing the documents, some historians now suggest that Adams does not deserve equal credit with Le Verrier.[೪]
[ಬದಲಾಯಿಸಿ] Naming
Shortly after its discovery, Neptune was referred to simply as "the planet exterior to Uranus" or as "Le Verrier's planet". The first suggestion for a name came from Galle. He proposed the name Janus. In England, Challis put forth the name Oceanus, particularly appropriate for a seafaring people. In France, Arago suggested that the new planet be called Leverrier, a suggestion which was met with stiff resistance outside France. French almanacs promptly reintroduced the name Herschel for Uranus and Leverrier for the new planet.
Meanwhile, on separate and independent occasions, Adams suggested altering the name Georgian to Uranus, while Leverrier (through the Board of Longitude) suggested Neptune for the new planet. Struve came out in favor of that name on December 29, 1846, to the Saint Petersburg Academy of Sciences.[೫] Soon Neptune became the internationally accepted nomenclature. In Roman mythology, Neptune was the god of the sea, identified with the Greek Poseidon. The demand for a mythological name seemed to be in keeping with the nomenclature of the other planets, all of which, except for Uranus, were named in antiquity.
The planet's name is translated literally as the sea king star in the Chinese,[೬] Korean, Japanese, and Vietnamese languages ( in Chinese characters, in Korean).
In India the name given to the planet is Varuna (Devanagari ) the god of the sea in Vedic / Hindu mythology, the equivalent of Poseidon/Neptune in the greco-roman mythology.
[ಬದಲಾಯಿಸಿ] ಭೌತಿಕ ಗುಣಲಕ್ಷಣಗಳು
[ಬದಲಾಯಿಸಿ] ಸಾಪೇಕ್ಷ ಗಾತ್ರ
೧.೦೨೪೩x೧೦೨೬ ಕಿ.ಗ್ರಾಂ. ದ್ರವ್ಯರಾಶಿಯನ್ನು ಹೊಂದಿರುವ ನೆಪ್ಚೂನ್ ಗ್ರಹವು ಭೂಮಿ ಮತ್ತು ಅತಿ ದೊಡ್ಡ ಅನಿಲ ದೈತ್ಯ ಗ್ರಹಗಳ ನಡುವಣ ಭಾರವನ್ನು ಹೊಂದಿದೆ: ಇದರ ದ್ರವ್ಯರಾಶಿಯು ಭೂಮಿಯ ೧೭ ಪಟ್ಟು ಇದ್ದರೂ, ಗುರು ಗ್ರಹದ ಕೇವಲ ೧/೧೮ ದ್ರವ್ಯರಾಶಿಯನ್ನು ಹೊಂದಿದೆ. ನೆಪ್ಚೂನ್ ಮತ್ತು ಯುರೇನಸ್ ಗ್ರಹಗಳು ಸಣ್ಣದಾಗಿರುವುದರಿಂದ ಮತ್ತು ಗುರು, ಶನಿ ಗ್ರಹಗಳ ರಚನೆಗಿಂತ ಭಿನ್ನವಾದ ರಚನೆಯನ್ನು ಹೊಂದಿರುವುದರಿಂದ, ಇವೆರಡನ್ನು ಹಲವೊಮ್ಮೆ ಅನಿಲ ದೈತ್ಯಗಳ ಉಪ-ವಿಭಾಗವಾದ "ಹಿಮ ದೈತ್ಯಗಳು" ಎಂದು ಪರಿಗಣಿಸಲಾಗುತ್ತದೆ.
[ಬದಲಾಯಿಸಿ] ರಚನೆ
ಸೂರ್ಯನಿಂದ ಅಷ್ಟೊಂದು ದೂರದಲ್ಲಿ ಪರಿಭ್ರಮಿಸುವ ಕಾರಣದಿಂದ, ನೆಪ್ಚೂನಗೆ ಬಹಳ ಕಡಿಮೆ ಸೂರ್ಯನ ಶಾಖವು ತಲುಪಿ, ಅದರ ಹೊರ ವಾಯುಮಂಡಲವು ಸುಮಾರು −೨೧೮ ಸೆ. (೫೫ ಕೆ.) ತಾಪಮಾನದಲ್ಲಿರುತ್ತದೆ. ಆದರೆ, ವಾಯುಮಂಡಲದೊಳಗೆ ಆಳವಾಗಿ ಹೋದಂತೆ, ಹೆಚ್ಚುವ ವಾಯುಪದರಗಳೊಂದಿಗೆ ತಾಪಮಾನವೂ ಹೆಚ್ಚಾಗುತ್ತದೆ. ಈ ಹೆಚ್ಚಿನ ಶಾಖವು ಗ್ರಹದ ಉಧ್ಭವದ ಕಾಲದಲ್ಲಿದ್ದ ಶಾಖದ ಅವಶೇಷವೆಂದೂ, ಮತ್ತು ಇದು ನಿಧಾನವಾಗಿ ಬಾಹ್ಯಾಕಾಶಕ್ಕೆ ಹೊರಹಾಕಲ್ಪಡುತ್ತಿದೆಯೆಂದೂ ನಂಬಲಾಗಿದೆ.
ಇದರ ಆಂತರಿಕ ರಚನೆಯು ಯುರೇನಸ್‌ನ ರಚನೆಯನ್ನು ಹೋಲುತ್ತದೆ. ಗ್ರಹದ ಒಳಭಾಗವು ಬಹುಶಃ ದ್ರವರೂಪಿ ಶಿಲೆ ಮತ್ತು ಲೋಹಗಳಿಂದ ಕೂಡಿದ್ದು, ಶಿಲೆಗಳು, ನೀರು, ಅಮೋನಿಯ ಮತ್ತ್ರು ಮೀಥೇನ್‌ಗಳ ಮಿಶ್ರಣದಿಂದ ಆವೃತವಾಗಿದೆ. ವಾಯುಮಂಡಲವು ಬಹುಶಃ ಕೇಂದ್ರದವರೆಗಿರುವ ದೂರದ ಸುಮಾರು ೧೦-೨೦% ದೂರದವರೆಗೂ ವ್ಯಾಪಿಸಿದ್ದು, ಹೊರಪದರಗಳಲ್ಲಿ ಬಹುತೇಕವಾಗಿ ಜಲಜನಕ (೮೦%) ಮತ್ತು ಮೀಥೇನ್(೧೯%)ಗಳಿಂದ ಕೂಡಿದೆ. ವಾಯುಮಂಡಲದ ಕೆಳ ಪದರಗಳಲ್ಲಿ ಮೀಥೇನ್, ಅಮೋನಿಯ ಮತ್ತು ನೀರಿನ ಸಾಂದ್ರತೆಗಳು ಹೆಚ್ಚಾಗುತ್ತವೆ. ಗಾಢವಾದ ಮತ್ತು ಬಿಸಿಯಾದ ಈ ವಲಯವು ನಿಧಾನವಾಗಿ ಅತಿ ಬಿಸಿಯಾದ ಒಳಭಾಗದ ಜೊತೆ ಒಂದಾಗುತ್ತದೆ. ನೆಪ್ಚೂನ್‌ನ ಕೇಂದ್ರದಲ್ಲಿ ಒತ್ತಡವು ಭೂಮಿಯ ಮೇಲ್ಮೈ ಮೇಲಿರುವ ಒತ್ತಡಕ್ಕಿಂತ ಲಕ್ಷಾಂತರ ಪಟ್ಟು ಅಧಿಕವಿದೆ. ಗ್ರಹದ ಅಕ್ಷೀಯ ಪರಿಭ್ರಮಣ ವೇಗ ಮತ್ತು ಅದರ ಹ್ರಸ್ವಾಕ್ಷತೆಗಳನ್ನು ಹೋಲಿಸಿ ನೋಡಿದರೆ, ಇದು ತನ್ನ ಕೇಂದ್ರದಲ್ಲಿ ಯುರೇನಸ್‌ಗಿಂತ ಕಡಿಮೆ ಸಾಂದ್ರತೆಯನ್ನು ಹೊಂದಿದೆ ಎಂದು ತಿಳಿದುಬರುತ್ತದೆ.
[ಬದಲಾಯಿಸಿ] ಕಾಂತಕ್ಷೇತ್ರ
ಯುರೇನಸ್‌ನ ಕಾಂತಗೋಳದಂತೆಯೇ ಇರುವ ನೆಪ್ಚೂನ್‌ನ ಕಾಂತಕ್ಷೇತ್ರವು ಗ್ರಹದ ಅಕ್ಷಕ್ಕೆ ಸುಮಾರು ೪೭° ಓರೆಯಲ್ಲಿದ್ದು, ಕಾಂತಕ್ಷೇತ್ರದ ಕೇಂದ್ರವು ಗ್ರಹದ ಕೇಂದ್ರದಿಂದ ಕಡೇಪಕ್ಷ ೧೩,೫೦೦ಕಿ.ಮೀ. ದೂರದಲ್ಲಿದೆ. ಈ ಎರಡು ಗ್ರಹಗಳ ಕಾಂತಕ್ಷೇತ್ರಗಳನ್ನು ಹೋಲಿಸಿದ ವಿಜ್ಞಾನಿಗಳು, ಈ ಕಾಂತಗೋಳಗಳ ವಿಪರೀತವಾದ ಓರೆಯು ಗ್ರಹಗಳ ಒಳಭಾದಲ್ಲಿ ಆಗುತ್ತಿರುವ ಪ್ರವಾಹಗಳಿಂದ ಉಂಟಾಗಿದೆಯೇ ಹೊರತು, ಯುರೇನಸ್ ತನ್ನ ಪಾರ್ಶ್ವದ ಮೇಲಿರುವುದರಿಂದ ಅಲ್ಲ ಎಂದು ತೀರ್ಮಾನಿಸಿದ್ದಾರೆ.
[ಬದಲಾಯಿಸಿ] ಹವಾಮಾನ
-
ಚಿತ್ರ:PIA02219 modest.jpg*Great Dark Spot (top), Scooter (middle white cloud), and the Wizard's eye (bottom).
ನೆಪ್ಚೂನ್ ಮತ್ತು ಯುರೇನಸ್‌ಗಳ ನಡುವೆ ಒಂದು ವ್ಯತ್ಯಾಸವೆಂದರೆ, ನೆಪ್ಚೂನ್‌ನ ಹವಾಮಾನದ ಚಟುವಟಿಕೆ. ಯುರೇನಸ್‌ನ ಹವೆಯು ಬಹುಪಾಲು ಶಾಂತವಾಗಿರುತ್ತದೆ. ಆದರೆ, ನೆಪ್ಚೂನ್‌ನ ವೇಗದ ಮಾರುತಗಳೊಂದಿಗೆ, ಅದರ ಹವಾಮಾನದಲ್ಲೂ ತೀವ್ರ ಚಟುವಟಿಕೆಗಳು ಉಂಟಾಗುತ್ತವೆ. ನೆಪ್ಚೂನ್‌ನ ವಾಯುಮಂಡಲವನ್ನು ಆಂತರಿಕ ಶಾಖವು ಪ್ರಚೋದಿಸುತ್ತದೆ ಎಂದು ನಂಬಲಾಗಿದೆ. ಇದರ ವೈಶಿಷ್ಟ್ಯವಾಗಿ, ೨೦೦೦ ಕಿ.ಮೀ./ಪ್ರತಿ ಘಂ. ವೇಗದ ಮಾರುತಗಳು ನಿರ್ಮಿಸಿದ ಪ್ರಬಲ ಚಂಡಮಾರುತಗಳನ್ನು ಇಲ್ಲಿ ಕಾಣಬಹುದು.
೧೯೮೯ರಲ್ಲಿ ನಾಸಾದ ವಾಯೇಜರ್ ೨ ನೌಕೆಯು ನೆಪ್ಚೂನ್‌ನ ಮೇಲೆ ಬೃಹತ್ ಗಾಢ ಚುಕ್ಕೆಯನ್ನು ಕಂಡುಹಿಡಿಯಿತು. ಈ ಚುಕ್ಕೆಯು ವಾಸ್ತ್ವದಲ್ಲಿ, ಸುಮಾರು ಯುರೇಷಿಯಾ ಗಾತ್ರದ ಒಂದು ಚಂಡಮಾರುತ. ಈ ಚಂಡಮಾರುತವು ಗುರುಗ್ರಹದ ಬೃಹತ್ ಕೆಂಪು ಚುಕ್ಕೆಯನ್ನು ಹೋಲುತ್ತಿತ್ತು. ಆದರೆ, ನವೆಂಬರ್ ೨, ೧೯೯೪ರಂದು ಹಬಲ್ ದೂರದರ್ಶಕಕ್ಕೆ ಗ್ರಹದ ಮೇಲೆ ಬೃಹತ್ ಗಾಢ ಚುಕ್ಕೆಯನ್ನು ಕಾಣಲಿಲ್ಲ. ಬದಲಿಗೆ, ಅದೇ ರೀತಿಯ ಹೊಸದೊಂದು ಚಂಡಮಾರುತವು ಗ್ರಹದ ಉತ್ತರಾರ್ಧಗೋಳದಲ್ಲಿ ಕಾಣಿಸಿಕೊಂಡಿತು. ಬೃಹತ್ ಗಾಢ ಚುಕ್ಕೆಯ ಕಣ್ಮರೆಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಇದರ ಬಗ್ಗೆ ಇರುವ ಒಂದು ವಾದದ ಪ್ರಕಾರ, ಗ್ರಹದ ಒಳಭಾಗದಿಂದ ಬಂದ ಉಷ್ಣ ಪ್ರವಾಹವು ವಾಯುಮಂಡಲದ ಸಮತೋಲನವನ್ನು ಮತ್ತು ವಾಯು ಪರಿಚಲನೆಯ ವಿನ್ಯಾಸಗಳನ್ನು ಭಂಗಮಾಡಿತು. ಸ್ಕೂಟರ್ ಎಂಬ ಇನ್ನೊಂದು ಬಿಳಿ ಬಣ್ಣದ ಚಂಡಮಾರುತವು ಬೃಹತ್ ಗಾಢ ಚುಕ್ಕೆಯ ದಕ್ಷಿಣಕ್ಕಿದೆ. ಮಾಂತ್ರಿಕನ ಕಣ್ಣು (ಬೃಹತ್ ಗಾಢ ಚುಕ್ಕೆ ೨) ಎಂದು ಕರೆಯಲಾಗುವ ದಕ್ಷಿಣದ ಒಂದು ಚಂಡಮಾರುತವು ಗ್ರಹದ ಮೇಲೆ ಎರಡನೇ ಅತಿ ತೀವ್ರವಾದ ಚಂಡಮಾರುತವಾಗಿದೆ.
ಅನಿಲ ದೈತ್ಯಗಳ ಒಂದು ವೈಶಿಷ್ಟ್ಯವೆಂದರೆ, ಕೆಳಗಿನ ಅಪಾರದರ್ಶಕ ಮೋಡಗಳ ಮೇಲೆ ನೆರಳು ಹಾಯಿಸುವ ಮೇಲ್ಪದರದ ಮೋಡಗಳ ಅಸ್ತಿತ್ವ. ನೆಪ್ಚೂನ್‌ನ ವಾಯುಮಂಡಲವು ಯುರೇನಸ್‌ದಕ್ಕಿಂತ ಬಹಳ ಹೆಚ್ಚು ಚಟುವಟಿಕೆಯಿಂದ ಕೂಡಿದ್ದರೂ, ಈ ಎರಡು ವಾಯುಮಂಡಲಗಳೂ ಒಂದೇ ಥರದ ಅನಿಲಗಳು ಮತ್ತು ಹಿಮಗಳಿಂದ ಕೂಡಿವೆ. ಯುರೇನಸ್ ಮತ್ತು ನೆಪ್ಚೂನ್‌ಗಳು ಗುರು ಮತ್ತು ಶನಿ ಗ್ರಹಗಳಂತೆ ಕಟ್ಟುನಿಟ್ಟಾಗಿ ಅನಿಲ ದೈತ್ಯಗಳಾಗಿರದೆ, ಮಂಜಿನ ದೈತ್ಯಗಳಾಗಿವೆ. ಅಂದರೆ, ಇವು ದೊಡ್ಡ ಘನರೂಪಿ ಒಳಭಾಗವನ್ನು ಹೊಂದಿದ್ದು, ಮಂಜಿನಿಂದ ರಚಿತವಾಗಿವೆ. ನೆಪ್ಚೂನ್ ಗ್ರಹವು ಬಹಳ ತಣ್ಣಗಿದ್ದು, ಅದರ ಮೋಡದ ಪದರದ ಮೇಲೆ -೨೨೪Cಯಷ್ಟು (-೩೭೨F) ಕಡಿಮೆ ತಾಪಮಾನಗಳನ್ನು ದಾಖಲಿಸಲಾಗಿದೆ.
[ಬದಲಾಯಿಸಿ] ನೆಪ್ಚೂನ್‌ನ ಅನ್ವೇಷಣೆ
ಆಗಸ್ಟ್ ೨೫, ೧೯೮೯ರಂದು ವಾಯೇಜರ್ ನೌಕೆಯು ನೆಪ್ಚೂನ್‌ನ ಅತಿ ಸಮೀಪಕ್ಕೆ ಬಂದಿತು. ನೌಕೆಯು ಇದರಾಚೆಗಿರುವ ಗ್ರಹಗಳವರೆಗೂ ಪಯಣಿಸುವ ಸಾಮರ್ಥ್ಯವನ್ನು ಹೊಂದಿರಲಿಲ್ಲವಾದ್ದರಿಂದ, ಕೊನೆಯದಾಗಿ ನೌಕೆಯನ್ನು ಟ್ರಿಟಾನ್ನತ್ತ ಹಾರಿಸಲಾಯಿತು. ವಾಯೇಜರ್ ೧ ನೌಕೆಯನ್ನೂ ಇದೇ ರೀತಿ ಶನಿಯ ಉಪಗ್ರಹವಾದ ಟೈಟನ್ನತ್ತ ಹಾರಿಸಿ ನೌಕೆಯನ್ನು ನಾಶ ಮಾಡಲಾಗಿತ್ತು.
ಶೋಧಕವು ಬೃಹತ್ ಗಾಢ ಚುಕ್ಕೆಯನ್ನೂ ಕಂಡುಹಿಡಿಯಿತು. ಹಬಲ್ ದೂರದರ್ಶಕದ ತದನಂತರದ ವೀಕ್ಷಣೆಗಳ ಪ್ರಕಾರ, ಈ ಬೃಹತ್ ಗಾಢ ಚುಕ್ಕೆಯು ಈಗ ಅಸ್ತಿತ್ವದಲ್ಲಿಲ್ಲ. ಮುಂಚೆ ಇದನ್ನು ಒಂದು ದೊಡ್ಡ ಮೋಡವೆಂದು ಭಾವಿಸಲಾಗಿದ್ದರೂ, ಈಚೆಗೆ ಈ ಚುಕ್ಕೆಯು ಮೋಡಗಳಲ್ಲಿದ್ದ ಒಂದು ದೊಡ್ಡ ರಂಧ್ರವೆಂದು ಹೇಳಲಾಗಿದೆ. ಸೌರಮಂಡಲದ ಅನಿಲರೂಪಿ ಗ್ರಹಗಳಲ್ಲೆಲ್ಲಾ ನೆಪ್ಚೂನ್ ಗ್ರಹವು ಅತ್ಯಂತ ಪ್ರಬಲವಾದ ಮಾರುತಗಳನ್ನು ಹೊಂದಿದೆ. ಸೌರಮಂಡಲದ ಹೊರಭಾಗಗಳಲ್ಲಿ ಸೂರ್ಯವು, ಭೂಮಿಯಿಂದ ಕಾಣುವ ಕೇವಲ ೧೦೦೦ದ ೧ ಪಾಲು ಪ್ರಕಾಶಮಾನವಾಗಿ ಕಾಣುತ್ತದೆ (ಆದರೂ, ಇಲ್ಲಿ ಸೂರ್ಯವು -೨೧ ಗೋಚರ ಪ್ರಮಾಣವನ್ನು ಹೊಂದಿದ್ದು, ಸಾಕಷ್ಟು ಸುಲಭವಾಗಿಯೇ ಗೋಚರಿಸುತ್ತತೆ). ಈ ವಲಯದಲ್ಲಿರುವ ನೆಪ್ಚೂನ್ ಗ್ರಹವು ವಿಜ್ಞಾನಿಗಳ ಎಲ್ಲಾ ಪೂರ್ವ ನಿರೀಕ್ಷೆಗಳನ್ನೂ ಸುಳ್ಳುಮಾಡಿತು.
ಸೂರ್ಯನಿಂದ ದೂರ ಹೋದಂತೆಲ್ಲ ಮಾರುತಗಳನ್ನು ಪ್ರಚೋದಿಸಲು ಲಭ್ಯವಿರುವ ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ ಎಂದು ನಾವು ನಿರೀಕ್ಷಿಸಬಹುದು. ಗುರುಗ್ರಹದ ಮಾರುತಗಳು ನೂರಾರು ಕಿ.ಮೀ. ಪ್ರತಿ ಘಂ. ವೇಗದಲ್ಲಿದ್ದವು. ನೆಪ್ಚೂನ್‌ನ ಮೇಲೆ ಮಾರುತಗಳು ನಿಧಾನವಾಗುವ ಬದಲು, ಇಲ್ಲಿ ಇನ್ನೂ ಹೆಚ್ಚು ವೇಗದ (೧೬೦೦ ಕಿ.ಮೀ./ಘಂ. ಗಿಂತ ಹೆಚ್ಚಿನ) ಮಾರುತಗಳು ಕಂಡುಬಂದವು.
ಇದು ಹೀಗೇಕೆ ಆಗುತ್ತದೆ ಎಂದು ವಿಜ್ಞಾನಿಗಳಿಗೆ ಈಗ ತಿಳಿದಿದೆ — ಶಕ್ತಿಯು ಸುಲಭವಾಗಿ ಲಭ್ಯವಿರುವಾಗ, ಪ್ರಕ್ಷುಬ್ಧತೆ ಉಂಟಾಗಿ, ಮಾರುತಗಳು ನಿಧಾನವಾಗುತ್ತವೆ (ಗುರುಗ್ರಹದ ಮೇಲೆ ಆಗುವಂತೆ). ಆದರೆ, ನೆಪ್ಚೂನ್‌ನ ಮೇಲೆ ಶಕ್ತಿಯು ಬಹಳ ಕಡಿಮೆಯಿರುವ ಕಾರಣ, ಒಮ್ಮೆ ಮಾರುತಗಳು ಶುರುವಾದರೆ, ಇವುಗಳಿಗೆ ಹೆಚ್ಚು ವಿರೋಧವಿಲ್ಲದೆ, ಹೆಚ್ಚಿನ ವೇಗವನ್ನು ಮುಂದುವರಿಸಿಕೊಂಡು ಹೋಗುತ್ತವೆ.
[ಬದಲಾಯಿಸಿ] ಗ್ರಹದ ಉಂಗುರಗಳು
ನೆಪ್ಚೂನ್ ಗ್ರಹವು ಮಂದವಾದ ಗ್ರಹ ಉಂಗುರ ವ್ಯವಸ್ಥೆಯನ್ನು ಹೊಂದಿದ್ದು, ಈ ಉಂಗುರಗಳ ರಚನೆಯ ವಿವರಗಳು ಇನ್ನೂ ತಿಳಿದುಬಂದಿಲ್ಲ. ಈ ಉಂಗುರಗಳು ವಿಲಕ್ಷಣವಾದ "ಗುಡ್ಡೆಯಾಕಾರದ" ವಿನ್ಯಾಸವನ್ನು ಹೊಂದಿವೆ. ಈ ವಿನ್ಯಾಸದ ಕಾರಣವು ಇನ್ನೂ ನಿಖರವಾಗಿ ತಿಳಿದುಬಂದಿಲ್ಲವಾದರೂ, ಹತ್ತಿರದಲ್ಲಿ ಪರಿಭ್ರಮಿಸುವ ಸಣ್ಣ ಉಪಗ್ರಹಗಳೊಡನೆ ಗುರುತ್ವ ಒಡನಾಟಗಳಿಂದ ಈ ರೀತಿ ಆಗಿರಬಹುದು ಎಂಬ ಶಂಕೆ ಇದೆ.
೮೦ರ ದಶಕದ ಮಧ್ಯದಲ್ಲಿ ಹಲವು ಮರೆಮಾಡುವಿಕೆ ಪ್ರಯೋಗಗಳು ನಡೆದವು. ಗ್ರಹವು ನಕ್ಷತ್ರವನ್ನು ಮರೆಮಾಡುವ ಸ್ವಲ್ಪವೇ ಮುನ್ನ ಮತ್ತು ಸ್ವಲ್ಪವೇ ನಂತರ ಒಂದು ಅಧಿಕ "ಮಿಟುಕು" ಒಮ್ಮೊಮ್ಮೆ ಈ ಪ್ರಯೋಗಗಳಲ್ಲಿ ಕಂಡುಬರುತ್ತಿತ್ತು. ಮಿಟುಕಿನ ಅವಲೋಕನೆಗಳಿಂದ ತಿಳಿದು ಬಂದದ್ದೇನೆಂದರೆ, ಈ ಉಂಗುರಗಳು ಪೂರ್ಣ ವೃತ್ತಾಕಾರದಲ್ಲಿರದೆ, ವೃತ್ತದ ಕಂಸಗಳಂತೆ ಬೇರೆ ಬೇರೆ ಇವೆ ಎಂಬ ಸಂಗತಿ. ಈ ಉಂಗುರಗಳು ಹಲವು ಮಂದವಾದ ಕಂಸಗಳನ್ನು ಒಳಗೊಂಡಿವೆ ಎಂದು ೧೯೮೯ರಲ್ಲಿ ಒದಗಿದ ವಾಯೇಜರ್ ೨ರ ಚಿತ್ರಗಳಿಂದ ತಿಳಿದುಬಂದಿತು. ಆಡಮ್ಸ್ ಎಂಬ ಹೆಸರಿನ ಹೊರ ಉಂಗುರದಲ್ಲಿ ಲಿಬರ್ಟ್, ಎಗಾಲಿಟ್, ಮತ್ತು ಫ್ರೆಟರ್ನಿಟ್ ಎಂಬ ೩ ಮುಖ್ಯ ಕಂಸಗಳಿವೆ (ಸ್ವತಂತ್ರ್ಯತೆ, ಸಮಾನತೆ, ಮತ್ತು ಸೋದರತೆಗಳ ಆಧಾರದ ಮೇಲೆ ಈ ಕಂಸಗಳ ಹೆಸರನ್ನು ಇಡಲಾಗಿದೆ). ಚಲನ ನಿಯಮಗಳ ಪ್ರಕಾರ ಈ ಕಂಸಗಳು ಸ್ವಲ್ಪವೇ ಕಾಲದಲ್ಲಿ ಹರಡಿಕೊಂದು ಒಂದೇ ಸಮನಾದ ವೃತ್ತಾಕಾರಕ್ಕೆ ಮಾರ್ಪಡಬೇಕು. ಹೀಗಾಗಿ, ಈ ಕಂಸಗಳ ಅಸ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಉಂಗುರದ ಸ್ವಲ್ಪವೇ ಒಳಗಿರುವ ಗೆಲಾಟೆಯ ಉಪಗ್ರಹದ ಗುರುತ್ವ ಪರಿಣಾಮಗಳು ಈ ಕಂಸಗಳನ್ನು ಪಸರಿಸಲು ಬಿಡದೆ ಹಿಡಿದಿಟ್ಟುಕೊಂಡಿದೆ ಎಂದು ಈಗ ನಂಬಲಾಗಿದೆ.
ವಾಯೇಜರ್ ಕ್ಯಾಮೆರಾಗಳು ಹಲವು ಬೇರೆ ಉಂಗುರಗಳನ್ನೂ ಕಂಡುಹಿಡಿದವು. ನೆಪ್ಚೂನ್‌ನ ಕೇಂದ್ರದಿಂದ ೬೩,೦೦೦ ಕಿ.ಮೀ. ದೂರದಲ್ಲಿರುವ ತೆಳುವಾದ ಆಡಮ್ಸ್ ಉಂಗುರವಲ್ಲದೆ, ೫೩,೦೦೦ ಕಿ.ಮೀ. ದೂರದಲ್ಲಿ ಲೆವೆರಿಯರ್ ಉಂಗುರ ಮತ್ತು ೪೨,೦೦೦ ಕಿ.ಮೀ. ದೂರದಲ್ಲಿ ಅಗಲವಾದ ಮತ್ತು ಮಂದವಾದ ಗ್ಯಾಲೆ ಉಂಗುರಗಳಿವೆ. ಗ್ಯಾಲೆ ಉಂಗುರದ ಒಂದು ಮಂದವಾದ ಹೊರಚಾಚಿದ ಭಾಗಕ್ಕೆ ಲ್ಯಾಸೆಲ್ ಎಂದು ಹೆಸರಿಡಲಾಗಿದೆ; ಇದರ ಹೊರ ತುದಿಯಲ್ಲಿ (ಸುಮಾರು ೫೭,೦೦೦ ಕಿ.ಮೀ. ಗಳ ದೂರದಲ್ಲಿ) ಅರಾಗೊ ಉಂಗುರವಿದೆ.[೭]
೨೦೦೫ರಲ್ಲಿ ಘೋಷಿಸಲಾದ ಭೂಮಿ-ಆಧಾರಿತ ಹೊಸ ಅವಲೋಕನೆಗಳ ಪ್ರಕಾರ, ನೆಪ್ಚೂನ್‌ನ ಉಂಗುರಗಳು ಮೊದಲು ತಿಳಿದಿದ್ದಕ್ಕಿಂತ ಹೆಚ್ಚು ಅಸ್ಥಿರವೆಂದು ಕಂಡುಬರುತ್ತವೆ. ವಿಶಿಷ್ಟವಾಗಿ, ಲಿಬರ್ಟ್ ಉಂಗುರವು ಇನ್ನೊಂದು ಶತಮಾನದ ಹೊತ್ತಿಗೆ ಪೂರ್ತಿ ನಾಶವಗಿ ಹೋಗಬಹುದು. ಈ ಹೊಸ ಅವಲೋಕನೆಗಳಿಂದ, ನೆಪ್ಚೂನ್‌ನ ಉಂಗುರಗಳ ಬಗ್ಗೆ ನಮಗಿರುವ ತಿಳುವಳಿಕೆಯು ಸಾಕಷ್ಟು ಗೊಂದಲ್ಕ್ಕೆ ಈಡಾದಂತಾಗಿದೆ.[೮]
ಉಂಗುರದ ಹೆಸರು | ತ್ರಿಜ್ಯ (ಕಿ.ಮೀ.) | ಅಗಲ (ಕಿ.ಮೀ.) | |
---|---|---|---|
1989 N3R ('ಗ್ಯಾಲೆ') | ೪೧,೯೦೦ | ೧೫ | |
1989 N2R ('ಲೆವೆರಿಯರ್') | ೫೩,೨೦೦ | ೧೫ | |
1989 N4R ('ಲ್ಯಾಸೆಲ್') | ೫೫,೪೦೦ | ೬ | |
ಅರಾಗೋ ಉಂಗುರ | ೫೭,೬೦೦ | - | |
ಲಿಬರ್ಟ್ ಉಂಗುರ ಕಂಸ | ೬೨,೯೦೦ | - | |
ಗಲ್ಟ್ ಉಂಗುರ ಕಂಸ | ೬೨,೯೦೦ | - | |
ಫ್ರೆತರ್ನಿಟ್ ಉಂಗುರ ಕಂಸ | ೬೨,೯೦೦ | - | |
ಕರೇಜ್ ಉಂಗುರ ಕಂಸ | ೬೨,೯೦೦ | - | |
1989 N1R ('ಆಡಮ್ಸ್') | ೬೨,೯೩೦ | <೫೦ |
[ಬದಲಾಯಿಸಿ] ನೈಸರ್ಗಿಕ ಉಪಗ್ರಹಗಳು
ಈಗ ತಿಳಿದಿರುವಂತೆ, ನೆಪ್ಚೂನ್ ೧೩ ನೈಸರ್ಗಿಕ ಉಪಗ್ರಹಗಳನ್ನು ಹೊಂದಿದೆ. ಇವುಗಳಲ್ಲಿ ಅತಿ ದೊಡ್ಡ ಮತ್ತು ಗೋಳಾಕಾರದಲ್ಲಿರುವಷ್ಟು ಭಾರಿಯಾದ ಏಕೈಕ ಉಪಗ್ರಹವು ಟ್ರಿಟಾನ್. ನೆಪ್ಚೂನ್‌ನ ಆವಿಷ್ಕಾರದ ಕೇವಲ ೧೭ ವರ್ಷಗಳ ನಂತರ ವಿಲಿಯಂ ಲ್ಯಾಸೆಲ್ ಈ ಉಪಗ್ರಹವನ್ನು ಕಂಡುಹಿಡಿದನು.
ಬೇರೆಲ್ಲಾ ದೊಡ್ಡ ಉಪಗ್ರಹಗಳಂತಿಲ್ಲದೆ, ಟ್ರಿಟಾನ್ ಪ್ರತಿಗಾಮಿ ಕಕ್ಷೆಯನ್ನು ಹೊಂದಿದ್ದು, ಬಹುಶಃ ಹೊರಗಿನಿಂದ ಬಂದು ನೆಪ್ಚೂನ್‌ನ ಗುರುತ್ವದಲ್ಲಿ ಸೆರೆಸಿಕ್ಕಿ ಬಿದ್ದಿದೆ ಎಂದು ಸೂಚಿಸುತ್ತದೆ. ಟ್ರಿಟಾನ್ ಉಪಗ್ರಹವು ಬಹುಶಃ ಕೈಪರ್ ಪಟ್ಟಿಯಿಂದ ಹೊರಬಂದು ನೆಪ್ಚೂನ್‌ನಿಂದ ಸೆರೆಹಿಡಿಯಲ್ಪಟ್ಟಿತು. ಇದು ನೆಪ್ಚೂನ್‌ನೊಂದಿಗೆ ಸಮಕಾಲಿಕ ಕಕ್ಷೆಯ ಹಿಡಿತದಲ್ಲಿ ಸಿಲುಕಿಕೊಳ್ಳುವಷ್ಟು ಹತ್ತಿರದಲ್ಲಿದೆ. ಇದಲ್ಲದೆ, ಈ ಉಪಗ್ರಹವು ನಿಧಾನವಾಗಿ ಸುರುಳಿಯಾಕಾರದ ಪಥದಲ್ಲಿ ಗ್ರಹದ ಹತ್ತಿರ ಬರುತ್ತಿದೆ. ಉಪಗ್ರಹವು ರೋಷೆ ಮಿತಿಯನ್ನು ತಲುಪಿದಾಗ, ನೆಪ್ಚೂನ್‌ನ ಗುರುತ್ವಕ್ಕೆ ಸಿಕ್ಕಿ ನುಚ್ಚು ನೂರಾಗುತ್ತದೆ. ಸುಮಾರು ೩೮.೧೫K (-೨೩೫C, -೩೯೨F) ತಾಪಮಾನವುಳ್ಳ ಟ್ರಿಟಾನ್ ಉಪಗ್ರಹವು ಸೌರಮಂಡಲದಲ್ಲೇ ಅತಿ ಶೀತಲ ಕಾಯಗಳಲ್ಲೊಂದು.
ಭೂಮಿಯ ಚಂದ್ರನಿಗೆ ಹೋಲಿಸಿದಂತೆ ಟ್ರಿಟಾನ್ | |||||
---|---|---|---|---|---|
ಹೆಸರು |
ವ್ಯಾಸ (ಕಿ.ಮೀ.) |
ದ್ರವ್ಯರಾಶಿ (ಕಿ.ಗ್ರಾಂ.) |
ಕಕ್ಷೀಯ ತ್ರಿಜ್ಯ (ಕಿ.ಮೀ.) | ಪರಿಭ್ರಮಣ ಕಾಲ (ದಿನಗಳು) | |
ಟ್ರಿಟಾನ್ | ೨೭೦೦ (ಚಂದ್ರನ ೮೦%) |
೨.೧೫x೧೦೨೨ (ಚಂದ್ರನ ೩೦%) |
೩೫೪,೮೦೦ (ಚಂದ್ರನ ೯೦%) |
-೫.೮೭೭ (ಚಂದ್ರನ ೨೦%) |
ದೂರದ ಆಧಾರದ ಮೇಲೆ ನೆಪ್ಚೂನ್‌ನ ಎರಡನೇ ಉಪಗ್ರಹವಾದ ನೆರೀಡ್, ಸೌರಮಂಡಲದಲ್ಲೇ ಕೆಲವು ಅತಿ ಹೆಚ್ಚು ಕಕ್ಷೀಯ ಕೇಂದ್ರ ಚ್ಯುತಿ ಹೊಂದಿರುವ ಉಪಗ್ರಹಗಳಲ್ಲಿ ಸೇರಿದೆ.
೧೯೮೯ರ ಜುಲೈ ನಿಂದ ಸೆಪ್ಟೆಂಬರ್‌ವರೆಗೆ ವಾಯೇಜರ್ ೨ ನೌಕೆಯು ನೆಪ್ಚೂನ್‌ನ ಆರು ಹೊಸ ಉಪಗ್ರಹಗಳನ್ನು ಕಂಡುಹಿಡಿಯಿತು. ಇವುಗಳಲ್ಲಿ ವಿಲಕ್ಷಣ ರೂಪದ ಪ್ರೋಟಿಯಸ್ ಉಪಗ್ರಹವು ಎಷ್ಟು ದೊಡ್ಡದಾಗಿದೆಯೆಂದರೆ, ಇದು ಇನ್ನು ಸ್ವಲ್ಪ ಹೆಚ್ಚು ಭಾರಿಯಾಗಿದ್ದಿದ್ದರೆ, ತನ್ನದೇ ಭಾರದಿಂದ ಕುಸಿದು ಗೋಳಾಕಾರಕ್ಕೆ ಮಾರ್ಪಡುತ್ತಿತ್ತು. ಇದು ನೆಪ್ಚೂನ್‌ನ ಎರಡನೇ ಅತಿ ಭಾರಿ ಉಪಗ್ರಹವಾಗಿದ್ದರೂ, ಇದು ಟ್ರಿಟಾನ್‌ನ ೦.೨೫% ದ್ರವ್ಯರಾಶಿಯನ್ನು ಮಾತ್ರ ಹೊಂದಿದೆ. ನೆಪ್ಚೂನ್‌ನ ಒಳ ಉಪಗ್ರಹಗಳಾದ ನಯಾಡ್, ಥಲಾಸ, ಡೆಸ್ಪಿನ ಮತ್ತು ಗೆಲಾಟೆಯಗಳು ಗ್ರಹದ ಉಂಗುರ ವಲಯದೊಳಗೆ ಇರುವಷ್ಟು ಹತ್ತಿರದಲ್ಲಿ ನೆಪ್ಚೂನ್‌ನನ್ನು ಪರಿಭ್ರಮಿಸುತ್ತವೆ. ಇವುಗಳ ಆಚೆ ಇರುವ ಲರಿಸ್ಸ ಉಪಗ್ರಹವು ೧೯೮೧ರಲ್ಲಿ ಒಂದು ನಕ್ಷತ್ರವನ್ನು ಮರೆಮಾಡಿದಾಗ, ಆ ಘಟನೆಯಿಂದ ಉಪಗ್ರಹದ ಅಸ್ತಿತ್ವವನ್ನು ತಿಳಿದುಕೊಳ್ಳಲಾಯಿತು. ಈ ಮರೆಮಾಡುವಿಕೆಯು ಗ್ರಹದ ಉಂಗುರಗಳಿಂದ ಆಗಿದೆ ಎಂದು ಮೊದಲು ಭಾವಿಸಲಾಗಿತ್ತಾದರೂ, ೧೯೮೯ರಲ್ಲಿ ವಾಯೇಜರ್ ೨ ನೌಕೆಯು ನೆಪ್ಚೂನ್‌ನನ್ನು ವೀಕ್ಷಿಸಿದಾಗ, ಇದು ಉಪಗ್ರಹದಿಂದ ಉಂಟಾಗಿತ್ತೆಂದು ತಿಳಿದುಬಂದಿತು. ೨೦೦೨ ದಿಂದ ೨೦೦೩ರವರೆಗೆ ಕಂಡುಹಿಡಿಯಲಾದ ಐದು ಹೊಸ ವಿಲಕ್ಷಣ ಆಕಾರದ ಉಪಗ್ರಹಗಳನ್ನು ೨೦೦೪ರಲ್ಲಿ ಘೋಷಿಸಲಾಯಿತು.[೯][೧೦]
- ಉಪಗ್ರಹಗಳ ಆವಿಷ್ಕಾರ ಕಾಲಗಳಿಗೆ, ಸೌರಮಂಡಲದ ಗ್ರಹ/ಉಪಗ್ರಹಗಳ ಆವಿಷ್ಕಾರ ಕಾಲಗಳು ಲೇಖನವನ್ನು ನೋಡಿ
[ಬದಲಾಯಿಸಿ] ರೂಪ ಮತ್ತು ಭೂಮಿಯಿಂದ ಗೋಚರತೆ
ನೆಪ್ಚೂನ್ ಗ್ರಹವು ಬರಿಗಣ್ಣಿಗೆ ಎಂದೂ ಕಾಣುವುದಿಲ್ಲ. ಅದರ ಗೋಚರ ಪ್ರಮಾಣವು +೭.೭ ಇಂದ +೮.೦ ವರೆಗೆ ಇರುವುದರಿಂದ ಅದನ್ನು ನೋಡಲು ದೂರದರ್ಶಕ ಅಥವಾ ದುರ್ಬೀನಿನ ಬಳಕೆ ಅನಿವಾರ್ಯ. ದೂರದರ್ಶಕದಿಂದ ನೋಡಿದಾಗ ನೆಪ್ಚೂನ್ ಗ್ರಹವು ಯುರೇನಸ್‌ನಂತೆ ಒಂದು ಸಣ್ಣ ನೀಲಿ-ಹಸಿರು ತಟ್ಟೆಯ ಥರ ಕಂಡುಬರುತ್ತದೆ. ಗ್ರಹದ ವಾಯುಮಂಡಲದಲ್ಲಿರುವ ಮೀಥೇನ್ ಅನಿಲವು ಈ ನೀಲಿ-ಹಸಿರು ಬಣ್ಣಕ್ಕೆ ಕಾರಣ. ಇದರ ಗೋಚರ ಗಾತ್ರವು ಬಹಳ ಕಡಿಮೆ ಇರುವುದರಿಂದ, ದೃಷ್ಟಿ ವಿವರಗಳಿಂದ ಇದರ ಅಧ್ಯಯನ ಬಹಳ ಕಷ್ಟಸಾಧ್ಯ; ಇದಲ್ಲದೆ, ದೂರದರ್ಶಕ ಮಾಹಿತಿಗಳೂ ಈಚೆಗೆ ತಂತ್ರಜ್ಞಾನ ಅಭಿವೃದ್ಧಿಯ ನಂತರವೇ ಹೆಚ್ಚಾಗಿ ದೊರಕತೊಡಗಿವೆ.
ನೆಪ್ಚೂನ್ ಗ್ರಹವು ೧೬೫ ವರ್ಷಗಳ ಪರಿಭ್ರಮಣೆ ಅವಧಿಯನ್ನು ಹೊಂದಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಗ್ಯಾಲೆ ಈ ಗ್ರಹವನ್ನು ಕಂಡುಹಿಡಿದ ಸ್ಥಾನಕ್ಕೆ (ಭೂಮಿಯ ಆಗಸದಲ್ಲಿ ನೋಡಿದಂತೆ) ಪುನಃ ಬರುತ್ತದೆ. ಈ ಮರಳುವಿಕೆಯು ಮೂರು ಬಾರಿ ನಡೆಯುತ್ತದೆ. ಈ ಮೂರು ಬಾರಿಗಳೆಂದರೆ: ಏಪ್ರಿಲ್ ೧೧, ೨೦೦೯ರಂದು ಅಭಿಗಾಮಿ ಚಲನೆಯಲ್ಲಿ; ಜುಲೈ ೧೭, ೨೦೦೯ರಂದು ಪ್ರತಿಗಾಮಿ ಚಲನೆಯಲ್ಲಿ; ಮತ್ತು ಮುಂದಿನ ೧೬೫ ವರ್ಷಗಳಲ್ಲಿ ಕೊನೆಯಬಾರಿಗೆ ಫೆಬ್ರವರಿ ೭, ೨೦೧೦ರಂದು. ಇದನ್ನು ಪ್ರತಿಗಾಮಿ ಚಲನೆಯ ಪರಿಕಲ್ಪನೆಯಿಂದ ವಿವರಿಸಬಹುದು. ಸೌರಮಂಡಲದಲ್ಲಿ ಭೂಮಿಯಿಂದಾಚೆಯಿರುವ ಎಲ್ಲಾ ಗ್ರಹಗಳಂತೆ, ನೆಪ್ಚೂನ್ ಗ್ರಹವು ಸಹ ತನ್ನ ಪರಿಭ್ರಮಣೆ ಅವಧಿಯಲ್ಲಿ ಪ್ರತಿಗಾಮಿ ಚಲನೆಗೆ ಒಳಗಾಗುತ್ತದೆ. ಪ್ರತಿಗಾಮಿ ಚಲನೆಯ ಪ್ರಾರಂಭವಲ್ಲದೆ, ಪರಿಭ್ರಮಣೆ ಅವಧಿಯಲ್ಲಿ ಸೇರಿದ ಬೇರೆ ಘಟನೆಗಳೆಂದರೆ, ವಿಯುತಿ, ಅಭಿಗಾಮಿ ಚಲನೆಗೆ ಮರುಕಳಿಕೆ, ಮತ್ತು ಸೂರ್ಯನೊಂದಿಗೆ ಯುತಿ.
ನೆಪ್ಚೂನ್ ಗ್ರಹವು ಸೂರ್ಯನ ಸುತ್ತ ಪರಿಭ್ರಮಿಸುತ್ತ, ೨೦೧೧ರ ಹೊತ್ತಿಗೆ ತನ್ನ ಮೊದಲ ಆವಿಷ್ಕಾರದ ಸಮಯದಲ್ಲಿದ್ದ ಸ್ಥಾನಕ್ಕೆ ಮರಳುತ್ತದೆ.
[ಬದಲಾಯಿಸಿ] ವಾಯೇಜರ್ ಹಾದುಹೋಗುವಿಕೆ
೧೯೮೯ರಲ್ಲಿ ವಾಯೇಜರ್ ೨ ನೆಪ್ಚೂನ್‌ನ ಬಳಿ ಹಾರಿಹೋಗಿ ಅದರ ಚಿತ್ರಗಳನ್ನು ಭೂಮಿಗೆ ಕಳುಹಿಸಿತು. ನಂತರದ ದಿನಗಳಲ್ಲಿ ಈ ಚಿತ್ರಗಳು PBS ದೂರದರ್ಶನ ಚ್ಯಾನೆಲ್‌ನ Neptune All Night ಎಂಬ ಕಾರ್ಯಕ್ರಮಕ್ಕೆ ಆಧಾರವಾದವು.
[ಬದಲಾಯಿಸಿ] ಇವನ್ನೂ ನೋಡಿ
- ಜ್ಯೋತಿಷ್ಯದಲ್ಲಿ ಗ್ರಹಗಳು - ನೆಪ್ಚೂನ್
- ನೆಪ್ಚೂನ್ ಪರಿಭ್ರಮಕ - ೨೦೧೭ರಷ್ಟು ಹೊತ್ತಿಗೆ ಉಡಾವಣಾ ಸಾಧ್ಯತೆಗಳಿರುವ ನೆಪ್ಚೂನ್ ಪರಿಭ್ರಮಕ ಮತ್ತು ಶೋಧಕ
- ನೆಪ್ಚೂನ್‌ನ ಟ್ರೋಜನ್ಗಳು - ನೆಪ್ಚೂನ್‌ನ ಲಗ್ರಾಂಜಿನ ಬಿಂದುಗಳಲ್ಲಿ ಪರಿಭ್ರಮಿಸುತ್ತಿರುವ ಕ್ಷುದ್ರಗ್ರಹಗಳು
[ಬದಲಾಯಿಸಿ] ಟಿಪ್ಪಣಿಗಳು
- ↑ "Neptune overview," Solar System Exploration, NASA.
- ↑ T. R. Spilker and A. P. Ingersoll (November 9, 2004). Outstanding Science in the Neptune System From an Aerocaptured Vision Mission. 36th DPS Meeting, Session 14 Future Missions.
- ↑ A. Bouvard (1821), Tables astronomiques publies par le Bureau des Longitudes de France, Paris, FR: Bachelier
- ↑ William Sheehan, Nicholas Kollerstrom, Craig B. Waff (December 2004). The Case of the Pilfered Planet - Did the British steal Neptune? Scientific American.
- ↑ Second report of proceedings in the Cambridge Observatory relating to the new Planet (Neptune) (1847). Astronomische Nachrichten, volume 25, p.309. Found at articles.adsabs.harvard.edu.
- ↑ Using Eyepiece & Photographic Nebular Filters, Part 2 (October 1997). Hamilton Amateur Astronomers at amateurastronomy.org.
- ↑ Gazetteer of Planetary Nomenclature Ring and Ring Gap Nomenclature (December 8, 2004). USGS - Astrogeology Research Program.
- ↑ Neptune's rings are fading away (March 26, 2005). New Scientist.
- ↑ Holman, Matthew J. et. al. (August 19, 2004). Discovery of five irregular moons of Neptune. Nature, p. 865 - 867.
- ↑ Five new moons for planet Neptune (August 18, 2004). BBC News.
[ಬದಲಾಯಿಸಿ] ಉಲ್ಲೇಖಗಳು
- Adams, J. C., "Explanation of the observed irregularities in the motion of Uranus, on the hypothesis of disturbance by a more distant planet", Monthly Notices of the Royal Astronomical Society, Vol. 7, p. 149, November 13, 1846.
- Airy, G. B., "Account of some circumstances historically connected with the discovery of the planet exterior to Uranus", Monthly Notices of the Royal Astronomical Society, Vol. 7, pp. 121-144, November 13, 1846.
- Challis, J., Rev., "Account of observations at the Cambridge observatory for detecting the planet exterior to Uranus", Monthly Notices of the Royal Astronomical Society, Vol. 7, pp. 145-149, November 13, 1846.
- Dale P. Cruikshank (1995). Neptune and Triton. ISBN 0-8165-1525-5.
- Galle, "Account of the discovery of the planet of Le Verrier at Berlin", Monthly Notices of the Royal Astronomical Society, Vol. 7, p. 153, November 13, 1846.
- Lunine J. I. (1993). "The Atmospheres of Uranus and Neptune". Annual Review of Astronomy and Astrophysics 31: 217-263. DOI:10.1146/annurev.aa.31.090193.001245.
- Ellis D. Miner et Randii R. Wessen (2002). Neptune: The Planet, Rings, and Satellites. ISBN 1-85233-216-6.
- Smith, Bradford A. "Neptune." World Book Online Reference Center. 2004. World Book, Inc. Accessed at nasa.gov.
- Scott S. Sheppard, Chadwick A. Trujillo A Thick Cloud of Neptune Trojans and Their Colors, Science, June 2006.
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
- NASA's Neptune fact sheet
- MPC's List Of Neptune Trojans
- Planets - Neptune A kid's guide to Neptune.
Future missions to Neptune
- Popular Science article
- Universe Today
- Scientific American Magazine (December 2004 Issue) The Case of the Pilfered Planet
ನಮ್ಮ ಸೌರವ್ಯೂಹ |
ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಕ್ಷುದ್ರಗ್ರಹ ಹೊನಲು |
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ |