ಥೈಲ್ಯಾಂಡ್
From Wikipedia
ರಾಷ್ಟ್ರಗೀತೆ: ಫ್ಲೆಂಗ್ ಚಾಟ್ | |
ರಾಜಧಾನಿ | ಬ್ಯಾಂಗ್‌ಕಾಕ್ |
ಅತ್ಯಂತ ದೊಡ್ಡ ನಗರ | ಬ್ಯಾಂಗ್‌ಕಾಕ್ |
ಅಧಿಕೃತ ಭಾಷೆ(ಗಳು) | ಥಾಯ್ ಭಾಷೆ |
ಸರಕಾರ | ಮಿಲಿಟರಿ ಶಾಸನ |
- ರಾಜ | ಭೂಮಿಬೋಲ್ ಅದುಲ್ಯದೇಜ್ |
- ಪ್ರಧಾನ ಮಂತ್ರಿ (ಪ್ರಸ್ತುತ) | ಜೆನರಲ್ ಸೊಂಧಿ ಬೂನ್ಯಾರಟ್‌ಕಲಿನ್ |
ಸ್ವಾತಂತ್ರ್ಯ | ಕ್ಮೇರ್ ಸಾಮ್ರಾಜ್ಯದಿಂದ. |
- ಸುಕೋಥೈ ಸಾಮ್ರಾಜ್ಯ | ೧೨೩೮೦ - ೧೩೬೮ |
- ಅಯುತ್ಥಾಯ ಸಾಮ್ರಾಜ್ಯ | ೧೩೫೦ - ೧೭೬೭ |
- ಥೊನ್‌ಬುರಿ ಸಾಮ್ರಾಜ್ಯ | ೧೭೬೭ - ೧೭೮೨ |
- ಚಕ್ರಿ ಸಾಮ್ರಾಜ್ಯ | ೧೭೮೨ - ಇಲ್ಲಿಯವರೆಗು |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 513,000 ಚದುರ ಕಿಮಿ ; (೪೯) |
198,000 ಚದುರ ಮೈಲಿ | |
- ನೀರು (%) | 0.4% |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | ೬೫,೪೪೪,೩೭೧ (೧೯) |
- ೨೦೦೦ರ ಜನಗಣತಿ | ೬೦,೯೧೬,೪೪೧ |
- ಸಾಂದ್ರತೆ | ೧೨೬ /ಚದುರ ಕಿಮಿ ; (೮೦) /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | ೫೬೦.೭ ಬಿಲಿಯನ್ ಡಾಲರ್ (೨೧ನೇ ಸ್ಥಾನ) |
- ತಲಾ | ೮೩೦೦ ಡಾಲರ್ (೬೯ನೇ ಸ್ಥಾನ) |
ಮಾನವ ಅಭಿವೃದ್ಧಿ ಸೂಚಿಕ (೨೦೦೩) |
೦.೭೭೮ (೭೩ನೇ ಸ್ಥಾನ) – ಮಧ್ಯಮ ದರ್ಜೆ |
ಕರೆನ್ಸಿ | ฿ ಥಾಯ್ ಭಾತ್ (THB ) |
ಕಾಲಮಾನ | (UTC+7) |
- Summer (DST) | (UTC+7) |
ಅಂತರ್ಜಾಲ TLD | .th |
ದೂರವಾಣಿ ಕೋಡ್ | +66 |
ಥೈಲ್ಯಾಂಡ್, ಆಗ್ನೇಯ ಏಷ್ಯಾದಲ್ಲಿರುವ ಒಂದು ಪ್ರಮುಖ ದೇಶ. ಈ ದೇಶವು ಪೂರ್ವದಲ್ಲಿ ಲಾಓಸ್ ಹಾಗು ಕಂಬೋಡಿಯ, ದಕ್ಷಿಣದಲ್ಲಿ ಥೈಲ್ಯಾಂಡ್ ಕೊಲ್ಲಿ ಹಾಗು ಮಲೇಶಿಯ, ಪಶ್ಚಿಮದಲ್ಲಿ ಅಂಡಮಾನ್ ಸಮುದ್ರ ಹಾಗು ಮ್ಯಾನ್‌ಮಾರ್ ದೇಶಗಳಿಂದ ಸುತ್ತುವರಿದಿದೆ. ಹಿಂದೆ ಥೈಲ್ಯಾಂಡ ದೇಶವನ್ನು ಸಿಯಾಂ ಎಂದು ಕರೆಯುತ್ತಿದ್ದರು. ಮೇ ೧೧, ೧೯೪೯ರಲ್ಲಿ ಥೈಲ್ಯಾಂಡ್ ಎಂದು ನಾಮಕರಿಸಲಾಯಿತು. ಥಾಯ್ ಭಾಷೆಯಲ್ಲಿ ಥಾಯ್ ಎಂದರೆ ಸ್ವಾತಂತ್ರ್ಯ ಎಂದು ಅರ್ಥ.
[ಬದಲಾಯಿಸಿ] ಇತಿಹಾಸ
ಭಾರತ,ಕಾಂಬೋಡಿಯ ಹಾಗು ಚೀನಾ ದೇಶಗಳ ಸಂಸ್ಕೃತಿಯಿಂತ ಪ್ರಭಾವಿತವಾಗಿರುವ ಥೈಲ್ಯಾಂಡ್‌ನ ಇತಿಹಾಸವನ್ನು ೧೨೩೮ರಲ್ಲಿ ಸ್ಥಾಪಿತವಾದ ಸುಖೋಥೈ ರಾಜವಂಶದೊಡನೆ ಗುರುತಿಸಲಾಗುತ್ತದೆ. ಇದಾದ ನಂತರ ಅಯುತ್ಥಾಯ ರಾಜವಂಶದವರು ೧೪ನೇ ಶತಮಾನದಲ್ಲಿ ದೊಡ್ಡ ಸಾಮ್ರಾಜ್ಯ ಸ್ಥಾಪಿಸಿದರು.
೧೬ನೇ ಶತಮಾನದಲ್ಲಿ ಯೂರೊಪಿಯನ್ನರ ಸಂಪರ್ಕಕ್ಕೆ ಥೈಲ್ಯಾಂಡ್ ಬಂದಿತಾದರು, ಯಾವುದೇ ಯೂರೊಪಿಯನ್ ದೇಶವು ಇದನ್ನು ತನ್ನ ಅಧಿಕಾರ ವ್ಯಾಪ್ತಿಗೆ ತೆಗೆದುಕೊಳ್ಳಲಾಗಲಿಲ್ಲ. ೧೯೩೨ರಲ್ಲಿ ನಡೆದ ಚಳುವಳಿಯ ನಂತರ ದೇಶದಲ್ಲಿ ಸಾಂವಿಧಾನಿಕ ಚಕ್ರಾಧಿಪತ್ಯವನ್ನು ಸ್ಥಾಪಿಸಲಾಯಿತು. ಇದಾದ ನಂತರ ಅನೇಕ ಬಾರಿ ಸೇನಾ ವಿಪ್ಲವಗಳು(Military coup) ನಡೆದವು.
ಪ್ರಧಾನಿ ತಕ್ಷಿನ್ ಶಿನವಾತ್ರ ಅವರ ಸರ್ಕಾರದ ವಿರುದ್ಧ ೧೯ ಸೆಪ್ಟೆಂಬರ್,೨೦೦೬ರಲ್ಲಿ ಮತ್ತೊಂದು ಸೇನಾ ವಿಪ್ಲವ ನಡೆಯಿತು. ಇದಾದ ನಂತರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು.