ಕ್ರೈಸ್ತ ಧರ್ಮ
From Wikipedia
ಕ್ರೈಸ್ತ ಧರ್ಮ ಯೇಸು ಕ್ರಿಸ್ತನ ಜೀವನ ಮತ್ತು ಉಪದೇಶಗಳ ಮೇಲೆ ಆಧಾರಿತ ಏಕದೇವವಾದ ಅನುಸರಿಸುವ ಧರ್ಮ. ೨೦೦೧ರ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ೨.೧ ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ, ಪ್ರಪಂಚದ ಅತೀ ದೊಡ್ಡ ಧರ್ಮವಾಗಿದೆ.
ಕ್ರಿ.ಶ. ೧ನೇ ಶತಮಾನದಲ್ಲಿ ಯಹೂದಿ ಧರ್ಮದ ಒಂದು ಪಂಥವಾಗಿ ಉದ್ಭವಿಸಿದ ಕ್ರೈಸ್ತ ಧರ್ಮ, ಯಹೂದಿಯರ ಧರ್ಮಗ್ರಂಥ ತನಖ್ ಅನ್ನು ತನ್ನ ಧರ್ಮಗ್ರಂಥವಾದ ಬೈಬಲ್ನ ಭಾಗವಾದ ಹಳೆಯ ಟೆಸ್ಟಮೆಂಟ್ಆಗಿ ಅಳವಡಿಸಿಕೊಂಡಿದೆ. ಇಸ್ಲಾಂ, ಯಹೂದಿ ಧರ್ಮ ಮತ್ತು ಕ್ರೈಸ್ತ ಧರ್ಮಗಳೆಲ್ಲಾ ಅಬ್ರಹಮ್ನನ್ನು ಪ್ರಮುಖನನ್ನಾಗಿ ಪರಿಗಣಿಸುವುದರಿಂದ ಇವನ್ನು ಅಬ್ರಹಮೀಯ ಧರ್ಮಗಳೆಂದೂ ವರ್ಗೀಕರಿಸಲಾಗುತ್ತವೆ.